Breaking News

ಐನಾಪುರದಲ್ಲಿ ಸಿಪಿ ಐ ಸಂತೋಷ್ ಹಳ್ಳೂರ್ ಇವರಿಂದ ಗಣೇಶುಸ್ತವ ಶಾಂತಿ ಸಭೆ.

Spread the love

ಐನಾಪುರದಲ್ಲಿ ಸಿಪಿ ಐ ಸಂತೋಷ್ ಹಳ್ಳೂರ್ ಇವರಿಂದ ಗಣೇಶುಸ್ತವ ಶಾಂತಿ ಸಭೆ.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಬರುವ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಗೃಹ ಇಲಾಖೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ಣಯ ಕೈಗೊಂಡಿದ್ದು, ಗಣೇಶನ ಆಗಮನ ದಿನ ಮತ್ತು ವಿಸರ್ಜನೆ ವೇಳೆ ಡಾಲ್ಬಿ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ, ಡಾಲ್ಬಿಯನ್ನು ಜಪ್ತಿ ಮಾಡಿ
ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಕಾಗವಾಡ ಹಾಗೂ ಅಥಣಿ ತಾಲ್ಲೂಕಿನ ಯಾವುದೇ ಗಣೇಶ ಮಂಡಳಿಗಳು ಡಾಲ್ಬಿ ಬುಕ್ ಮಾಡಬಾರದೆಂದು ಅಥಣಿ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ ಹಳ್ಳೂರ ಐನಾಪುರದಲ್ಲಿ ತಿಳಿಸಿದರು.
ಬುಧವಾರ ಸಂಜೆ ಐನಾಪುರ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಪಟ್ಟಣದ ಎಲ್ಲ ಗಣೇಶ ಮಂಡಳಿಗಳ ಪದಾಧಿಕಾರಿಗಳನ್ನು ಆಹ್ವಾನಿಸಿ ಶಾಂತಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಿರ್ಧಾರವನ್ನು ಸಿಪಿಐ ಸಂತೋಷ ಹಳ್ಳೂರ ವಿವರಿಸಿದರು.
ಕಾಗವಾಡ ತಾಲ್ಲೂಕಿನಲ್ಲಿ ೩೫೫, ಅಥಣಿ ತಾಲ್ಲೂಕಿನಲ್ಲಿ ೫೮೯, ಹಾಗೂ ಐಗಳಿ ವಿಭಾಗದಲ್ಲಿ ೨೪೬ ಗಣೇಶ ಮಂಡಳಿಗಳು ಇದ್ದು, ಎಲ್ಲ ಮಂಡಳಿಗಳಿAದ ಈ ತಿಂಗಳ ೨೭ರಂದು ಗಣೇಶ ಸ್ಥಾಪನೆ ನಡೆಯಲಿದೆ. ಎಲ್ಲಾ ಮಂಡಳಿಗಳು ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು.
ಗಣೇಶನ ಸ್ಥಾಪನೆಗಾಗಿ ವಿದ್ಯುತ್ ಸಂಪರ್ಕ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗುವುದು. ಪ್ರತಿಯೊಂದು ಮಂಡಳಿ ರಾತ್ರಿ ೧೦ ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಬಹುದು.
ಸಾಮಾಜಿಕ ಭದ್ರತೆಗಾಗಿ ಪ್ರತಿಯೊಬ್ಬರೂ ತಮ್ಮ ಮಂಡಳಿಗೆ ಬಂದ ಭಕ್ತರನ್ನು ಆತ್ಮೀಯವಾಗಿ ಸ್ವಾಗತಿಸಿ, ಒಳ್ಳೆಯ ಅಭಿಪ್ರಾಯ ಮೂಡಿಸುವಂತೆ ಕಾರ್ಯನಿರ್ವಹಿಸಬೇಕೆಂದು ಸಿಪಿಐ ಸಂತೋಷ ಹಳ್ಳೂರ ಹಾಗೂ ಪಿಎಸ್‌ಐ ರಾಘವೇಂದ್ರ ಖೋತ ಸೂಚಿಸಿದರು.
ಪ್ರಾರಂಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸಂಜೀವ ಭಿರಡಿ ಸ್ವಾಗತಿಸಿ, ಐನಾಪುರ ಪಟ್ಟಣದಲ್ಲಿ ೪೨ ಗಣೇಶ ಮಂಡಳಿಗಳು ಇದ್ದು, ಶಾಂತಿಯುತವಾಗಿ ಗಣೇಶ ಚತುರ್ಥಿ ಆಚರಿಸುವ ಪರಂಪರೆ ಇಲ್ಲಿದೆ ಎಂದು ಹೇಳಿದರು.
ಶಾಂತಿ ಸಭೆಯಲ್ಲಿ ಕ್ರೈಂ ಪಿಎಸ್‌ಐ ಎಂ.ಎ. ಆಳಂದ, ಪೊಲೀಸ್ ಸಿಬ್ಬಂದಿ ಸುರೇಶ್ ನಂದಿವಾಲೆ, ವಿಜಯ ನರಗಟ್ಟೆ, ವಿಶ್ವನಾಥ ಖಟಾಂವೆ, ನವಲು ಹಾಲಾರೋಟ್ಟಿ, ವಿಜಯ ಹರಳೆ, ದಾದಾ ಜತ್ತೆನ್ನವರ, ಗುರುರಾಜ ಮಡಿವಾಳ ಸೇರಿದಂತೆ ಗಾಂಧಿಚೌಕ, ಬಜಾರ್‌ಪೇಟ ಹಾಗೂ ನೇಹರುಚೌಕ್ ಸೇರಿ ೪೨ ಗಣೇಶ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ