Breaking News

ಅನಾರೋಗ್ಯದಿಂದ ಯೋಧ ನಿಧನ… ರಾಮನಗರಕ್ಕೆ ತಲುಪಿದ ಪಾರ್ಥಿವ ಶರೀರ

Spread the love

ಅನಾರೋಗ್ಯದಿಂದ ಯೋಧನ ಪಾರ್ಥಿವ ಇಂದು ಬೆಳಗಾವಿಯ ಮೂಲಕ ಖಾನಾಪೂರದ ರಾಮನಗರಕ್ಕೆ ತಲುಪಿತು. ಈ ವೇಳೆ ಹಲವಾರು ಜನರು ಅಂತ್ಯಯಾತ್ರೆಯಲ್ಲಿ ಭಾಗಿಯಾಗಿದ್ಧರು.
ಜೋಯಿಡಾ ತಾಲೂಕಿನ ರಾಮನಗರದ ಯೋಧ ಶಶಿಕಾಂತ ಕೆ. ಬಾವಾ (44) ಮಂಗಳವಾರ ರಾತ್ರಿ ಹೊಟ್ಟೆ ನೋವಿನಿಂದ ನಿಧನರಾದರು. ಯೋಧ ಶಶಿಕಾಂತ 281 ಶಿಲ್ಡ್ ರೆಜಮೆಂಟಲ್ ಅಟ್ಲರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಆಕಸ್ಮಿಕ ನಿಧನದಿಂದ ರಾಮನಗರದಲ್ಲಿ ಶೋಕ ವ್ಯಕ್ತವಾಗುತ್ತಿದೆ.
ಇಂದು ಗುರುವಾರ ಅವರ ಪಾರ್ಥಿವ ಶರೀರವನ್ನು ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ರಾಮನಗರಕ್ಕೆ ಕರೆದೊಯ್ಯಲಾಯಿತು. ಚರ್ಚ ಗಲ್ಲಿಯ ಹಿಂದೂ ಸ್ಮಶಾನ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ. ಅಂತ್ಯ ಯಾತ್ರೆಯಲ್ಲಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
ಯೋಧ ಶಶಿಕಾಂತ ಕೆ. ಬಾವಾ ಅವರು ರಾಮನಗರದ ಕೆಪಿಎಸ್ ಕಾಲನಿಯ ರಹಿವಾಸಿಯಾಗಿದ್ದು, ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ