ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ ಸರ್ಕಿಟ್ ನಿಂದ ಮನೆಯೊಂದು ಸಂಪೂರ್ಣ ಸುಟ್ಟ ಭಷ್ಮವಾದ ಘಟನೆ ಜರುಗಿದೆ. ಹೊಸಪೇಟೆ ಗ್ರಾಮ ಪಂಚಾಯತ ಅಡಿಯಲ್ಲಿ ಶಿಂದಿಹಟ್ಟಿ ಗ್ರಾಮದ ರಾಮಾ ಲಕ್ಮಣ ಮಗದುಮ್ಮ ಎಂಬುವರ ಮನೆಯಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ ನಿಂದ ಮನೆ ಮತ್ತು ಮನೆಯಲ್ಲಿಯ ದವಸ ಧಾನ್ಯ ಸೇರಿದಂತೆ ಹಣ ವಡವೆಗಳು ಸಂಪೂರ್ಣ ಸುಟ್ಟು ಭಷ್ಮವಾಗಿದೆ.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಹಣಬರ ಸಂಘದ ಚಿಕ್ಕೋಡಿ ಜಿಲ್ಲಾ ಅದ್ಯಕ್ಷ ಶೀತಲ್ ಮುಂಡೆ ಅಕಸ್ಮಿಕವಾಗಿ ವಿದ್ಯುತ್ ಅವಘಡದಿಂದ ಶಿಂದಿಹಟ್ಡಿ ಗ್ರಾಮದ ಲಕ್ಮಣ ಮಗದುಮ್ಮ ರವರ ಮನೆ ಸುಟ್ಟು ಸಂಪೂರ್ಣ ಭಷ್ಮವಾಗಿದೆ ಇದರಿಂದಾಗಿ ಮಗದುಮ್ಮ ಕುಟುಂಬ ಬೀದಿಗೆ ಬಂದಿದ್ದು ಅವರ ರಕ್ಷಣೆಗೆ ಸರಕಾರ ಕ್ರಮ ಜರುಗಿಸುವಂತೆ ಆಗ್ರಹಿಸಲಾಗುವದು ಎಂದರು
ನಂತರ ಮಗದುಮ್ಮ ಕುಟುಂಬ ತಹಸಿಲ್ದಾರ ಬಲರಾಮ ಕಟ್ಟಿಮನಿ ಯವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸಿಲ್ದಾರ ಕೂಡಲೆ ಸಂಭಂದಿಸಿದ ಅಧಿಕಾರಿಗೆ ಕೂಡಲೇ ಕ್೪ಮ ಜರುಗಿಸಲು ಆದೇಶಿಸಿದರು.
ಮಾದೇವಿ ಎಮ್ಯಾಗೋಳ ಮಾತನಾಡಿ ನಾವು ರಾತ್ರಿ ಮನೆಯಲ್ಲಿ ಮಲಗಿರುವಾಗ ಕರೆಂಟ್ ಶಾಕ್ ದಿಂದ ಬೆಂಕಿ ತಗುಲಿ ಮನೆ ಸುಟ್ಟು ಕರಕಲಾಗಿದೆ ಮನೆಯಲ್ಲಿಯ ಎಲ್ಲ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ತಮ್ಮ ಅಸಹಾಯಕತೆ ತೊಡಿಕೊಂಡರು
ಈ ಸಂದರ್ಭದಲ್ಲಿ ಹಣಬರ ಸಂಘದ ಸದಸ್ಯರಾದ ಮಾರುತಿ ಪಾಟೀಲ, ಬಸವರಾಜ ಕಡಲಗಿ, ಶ್ರೀಕಾಂತ ರಾಮಪ್ಪಾ ಮಗದುಮ್ಮ, ಮಾದೇವಿ ಎಮ್ಮಯಾಗೋಳ, ಕವಿತಾ ಮಗದುಮ್ಮ, ಉಪಸ್ಥಿತರಿದ್ದರು.
Laxmi News 24×7