Breaking News

ಗುಮ್ಮಟನಗರಕ್ಕೆ ಹೊಸ ಐಷಾರಾಮಿ ಹೋಟೆಲ್ ‘ಪ್ರವಾಸಾ’ ಸೇರ್ಪಡೆ

Spread the love

ಗುಮ್ಮಟನಗರಕ್ಕೆ ಹೊಸ ಐಷಾರಾಮಿ ಹೋಟೆಲ್ ‘ಪ್ರವಾಸಾ’ ಸೇರ್ಪಡೆ

ಗುಮ್ಮಟನಗರಿಗೆ ಮತ್ತೊಂದು ಐಷಾರಾಮಿ ಹೋಟೆಲ್ ನ ಪ್ರವೇಶವಾಗಿದೆ. ಇದರಿಂದಾಗಿ ಬಸವನಾಡಿನ ಪ್ರವಾಸೋದ್ಯಮಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಲಿದೆ.

 

ಸ್ವತಂತ್ರ ಕಾಲೊನಿಯ ವಿಜಯಪುರ – ಅಥಣಿ ರಸ್ತೆಯಲ್ಲಿನ ‘ಪ್ರವಾಸಾ’ ಹೆಸರಿನ ಹೋಟೆಲ್ ನಿಜಕ್ಕೂ ಇಲ್ಲಿಗೆ ಬರಲಿರುವ ಪ್ರವಾಸಿಗರಿಗೆ ಅನುಕೂಲಕರ ವಸತಿ ಹಾಗೂ ಆತಿಥ್ಯವನ್ನು ಒದಗಿಸಲಿದೆ. ಶನಿವಾರ ಹೋಟೆಲ್ ಉದ್ಘಾಟಿಸಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿತೇಂದ್ರಕುಮಾರ್ ಜೈನ್ ಹಾಗೂ ಅವರ ತಂಡಕ್ಕೆ ಶುಭಹಾರೈಸಿದೆ.

ಆತಿಥ್ಯ ವಲಯದಲ್ಲಿ ಈಗಾಗಲೇ ಸಾಕಷ್ಟು ಹೆಸರುವಾಸಿಯಾಗಿರುವ ಪ್ರವಾಸಾ ಹೋಟೆಲ್ ಇಂದೋರ್, ಅಹ್ಮದಾಬಾದ್, ವಡೋದರ, ಕೊಲ್ಹಾಪುರ, ಶಿರಡಿಗಳಲ್ಲಿ ತಮ್ಮ ಶಾಖೆಗಳನ್ನು ಹೊಂದಿದ್ದು, ಇದೀಗ #ನಮ್ಮವಿಜಯಪುರ ದಲ್ಲು ಶಾಖೆ ತೆರೆದಿರುವುದು ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಲಿದೆ. ಜೊತೆಗೆ ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ