Breaking News

ಡಾನ್ ಸುಶೀಲ್ ಹತ್ಯೆ: ಗುಂಡೇಟು ತಿಂದ ಇಬ್ಬರು

Spread the love

ಡಾನ್ ಸುಶೀಲ್ ಹತ್ಯೆ: ಗುಂಡೇಟು ತಿಂದ ಇಬ್ಬರು
ಭೀಮಾತೀರದ ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಹಳೆ ಶಿಷ್ಯ ಸುಶೀಲ ಕಾಳೆ ಮೇಲೆ ನಿನ್ನೆ ಹಾಡು ಹಗಲೆ ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದ ಇಬ್ಬರು ಆರೋಪಿಗಳು ಇಂದು ಬೆಳಿಗ್ಗೆ 6ಗಂಟೆ ಸುಮಾರಿಗೆ ವಿಜಯಪುರ ನಗರದ ಹೊರವಲಯದ ಇಟ್ಟಂಗಿಹಾಳ ಗ್ರಾಮದ ಬಳಿ ಪರಾರಿ ಆಗುತ್ತಿರುವ ಮಾಹಿತಿ ಪೊಲೀಸರಿಗೆ ಬಂದಿದೆ.
ಬೈಕ್‌ನಲ್ಲಿ ಪರಾರಿ ಆಗಲು ಯತ್ನಿಸುತ್ತಿದ್ದಾಗ ಆರೋಪಿಗಳನ್ನು ಹಿಡಿಯಲು ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿ ಆಕಾಶ ಕಲ್ಲವ್ವಗೋಳ, ಸುಭಾಷ ಬಗಲಿ ಕಾಲಿಗೆ ತಲಾ ಒಂದೊಂದು ಗುಂಡು ಬಿದ್ದಿವೆ.
ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಗಾಂಧಿ ಚೌಕ ಸಿಪಿಐ ಪ್ರದೀಪ್ ತಳಕೇರಿ ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಸಿಪಿಐ ತಳಕೇರಿ ಒಟ್ಟು ಮೂರು ಸುತ್ತು ಗುಂಡ ಹಾರಿಸಿದ್ದಾರೆ. ಸದ್ಯ ನಾಲ್ಕು ಆರೋಪಿಗಳು ಪರಾರಿಯಾಗಿದ್ದು, ಸೆರೆಗೆ ಪೊಲೀಸರು ಜಾಲ ಬೀಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ