Breaking News

ಹೈದ್ರಾಬಾದನಲ್ಲಿ ತೆಲಂಗಾಣ ಅಣುಕು ಶಾಸನ ಸಭೆ ಸ್ಪರ್ಧೆ ಸಂಜನಾ ಪಾಟೀಲಗೆ ಗೌರವ

Spread the love

ಹೈದ್ರಾಬಾದನಲ್ಲಿ ತೆಲಂಗಾಣ ಅಣುಕು ಶಾಸನ ಸಭೆ ಸ್ಪರ್ಧೆ ಸಂಜನಾ ಪಾಟೀಲಗೆ ಗೌರವ
ಹೈದ್ರಾಬಾದಿನಲ್ಲಿ ನಡೆದ ಅನಕು ಶಾಸನ ಸಭೆ ಸ್ಪರ್ಧೆಯಲ್ಲಿ ಸಂಜನಾ ಪಾಟೀಲ ಭಾಗವಹಿಸಿ ಅತ್ಯುತ್ತಮ ಅಣುಕು ಶಾಸಕಿಯಾಗಿ ತೆಲಂಗಾಣ ರಾಜ್ಯಪಾಲರ ಗೌರವಕ್ಕೆ ಪಾತ್ರರಾಗಿದ್ದಾಳೆ
ಇತ್ತೀಚೆಗೆ ತೆಲಂಗಾಣ ರಾಜ್ಯದ ಹೈದ್ರಾಬಾದನಲ್ಲಿ ಅಂಡರ್ ಏಟೀನ್ ವರ್ಲ್ಡ್ ನ್ಯಾಶನಲ್ ಆರ್ಗನೈಸೇಷನ್ ನಿಂದ ೧೦ ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಣುಕು ಶಾಸನ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಕುಮಾರಿ ಸಂಜನಾ ಪಾಟೀಲ ಪಾಲ್ಗೊಂಡು ಅತ್ಯುತ್ತಮ ಅಣುಕು ಶಾಸಕಿ ಗೌರವಕ್ಕೆ ಭಾಜನಳಾದ ಕೇಂದ್ರ ಮತ್ತು ತೆಲಂಗಾಣ ರಾಜ್ಯ ಸರ್ಕಾರದಿಂದ ಪ್ರಶಂಶೆಗೊಳಗಾಗಿ
ಬೆಳಗಾವಿ ಜಿಲ್ಲೆ ಮತ್ತು ಕನ್ನಡ ನಾಡಿನ ಹಿರಿಮೆ ಹೆಚ್ಚಿಸಿದ್ದಾರೆ. ತೆಲಂಗಾಣ ರಾಜ್ಯದ ಅಣುಕು ಶಾಸನ ಸಭೆಯಲ್ಲಿ ವಿದ್ಯಾರ್ಥಿ ಶಾಸಕಳಾಗಿ ಪಾಲ್ಗೊಂಡು ರಾಜ್ಯಾಡಳಿತ ಮತ್ತು ಶಾಸನ ಸಭೆಯ ಹಕ್ಕು ಮತ್ತು ಅಧಿಕಾರದೊಂದಿಗೆ ಅನುಷ್ಠಾನ ಕುರಿತು ಸಮಗ್ರ ಮಾಹಿತಿಯೊಂದಿಗೆ ಅಧಿವೇಶನದ ಅನುಭವ ಪಡೆದು ತೆಲಂಗಾಣ ರಾಜ್ಯದ ರಾಜ್ಯಪಾಲ ಜಿಷ್ಣುದೇವ ವರ್ಮಾ ಅವರಿಂದ ರಾಜ್ಯಭವನದಲ್ಲಿ ಪ್ರಶಂಸಾ ಪತ್ರ ಮತ್ತು ಕೈಗಡಿಯಾರ ನೆನಪಿನ ಕಾಣಿಕೆಯಾಗಿ ಪಡೆದುಕೊಂಡಿದ್ದಾಳೆ ಮಕ್ಕಳ ದಿನಾಚರಣೆ ದಿನ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಜೊತೆಗೂಡಿ ಮಾಡಿದ್ದ ಅಣಕು ವಿಧಾನಸಭೆ ಅಧಿವೇಶನದಲ್ಲಿ, ಡ್ರಗ್ಸ್ ಸೇವನೆ ಕುರಿತು ಜನರಲ್ಲಿ ಅತೀವ ಜಾಗೃತಿ ಮೂಡಿಸಿದು,
ಕಳೆದ ದಿನಾಂಕ ೧೧ ರಂದು ಡೆಲ್ಲಿ ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರ ಸಚಿವ ಕಿರಣ್ ರಿಜಿಜು ಅವರೊಂದಿಗೆ ಸಂಸತ್ ಭವನದಲ್ಲಿ ಆಡಳಿತದ ಅಧಿಕಾರ ಮತ್ತು ಅನುಷ್ಠಾನ ಕುರಿತು ಸಮಗ್ರವಾಗಿ ಸಮಾಲೋಚಿಸಿ ಸೈ ಎನ್ನಿಸಿಕೊಂಡಿದ್ದು, ಇವಳ ಅಪ್ರತಿಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತೆಲಂಗಾಣ ವಿರೋಧ ಪಕ್ಷದ ನಾಯಕ, ಭಾರತ ರಾಷ್ಟ್ರ ಮುಖ್ಯಸ್ಥ ,ಕೆ.ಚಂದ್ರಶೇಖರ್ ರಾವ್ ಜೊತೆಗೂಡಿ ಮೈಕ್ ಡ್ರಾಪ್ ಅಧಿವೇಶನ ಕೂಡ ಯಶಸ್ವಿಯಾಗಿಸಿದ್ದು, ಈ ಎಲ್ಲ ಸಾಧನೆಗೆ ಹೈದ್ರಾಬಾದನ ಮಹಾಪೌರರಾದ ವಿಜಯ ಲಕ್ಷ್ಮಿ ಗಡವಾಲ್ ರಿಂದಲೂ ಸನ್ಮಾನಿತಳಾಗಿದ್ದಾಳೆ. .
ಸಂಜನಾ ಸದ್ಯ ಹೈದ್ರಾಬಾದ ನ ಬಂಜಾರಾ ಹಿಲ್ಸ್ ಡೆಲ್ಲಿ ಸ್ಕೂಲ್ ಆಫ್ ಎಕ್ಸಲನ್ಸ್ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅರಳು ಹುರಿದಂತೆ ನಿರರ್ಗಳವಾಗಿ ಮಾತನಾಡುವ ಕಲೆ ರೂಢಿಸಿಕೊಂಡಿರುವ ಈ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಂಜನಾ ಸಿವಿಲ್ ಎಂಜನೀಯರ್ ಉದಯ ಪಾಟೀಲ ಅವರ ಸುಪುತ್ರಿಯಾಗಿದ್ದು ಇವಳು ಓದಿನಲ್ಲಷ್ಟೇ ಅಲ್ಲದೆ, ಸ್ಪರ್ಧೆಗಳೊಂದಿಗೆ ಆಟೋಟದಲ್ಲಿಯೂ ಸದಾ ಎತ್ತಿದ ಇವಳದ್ದಾಗಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ