ಲೋಂಡಾದ ವಾಟರಾ ಬಳಿ ಟ್ರಕ್ ಪಲ್ಟಿ: ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು
ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ಲೋಂಡಾ ರೇಲ್ವೆ ಗೇಟ್ ಬಳಿ, ಗೋವಾಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.
ಟ್ರಕ್ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 11 ಜಾನುವಾರುಗಳು ಸಿಕ್ಕಿಹಾಕಿಕೊಂಡಿದ್ದವು. ಸ್ಥಳಕ್ಕೆ ತಕ್ಷಣವೇ ಲೋಂಡಾ ಪೊಲೀಸ್ ಪಡೆ ಧಾವಿಸಿ, ಜೆಸಿಪಿ ಯಂತ್ರದ ಸಹಾಯದಿಂದ ಎಲ್ಲ ಜಾನುವಾರುಗಳನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಣೆ ಮಾಡಿದ್ದಾರೆ.
ಈ ಅಪಘಾತದ ಕುರಿತು ಲೋಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
Laxmi News 24×7