Breaking News

ಚಾಲುಕ್ಯರ ಸ್ಮಾರಕ ಹಿನ್ನೆಲೆ ಐಹೊಳೆಯಲ್ಲಿ ಮನೆ ದುರಸ್ಥಿಗೆ ಸಿಗದ ಅನುಮತಿ…

Spread the love

ಚಾಲುಕ್ಯರ ಸ್ಮಾರಕ ಹಿನ್ನೆಲೆ ಐಹೊಳೆಯಲ್ಲಿ ಮನೆ ದುರಸ್ಥಿಗೆ ಸಿಗದ ಅನುಮತಿ…
ಸಂಪೂರ್ಣ ಗ್ರಾಮವನ್ನ ಸ್ಥಳಾಂತರಿಸದ ಸರ್ಕಾರದ ವಿರುದ್ಧ ಜನರ ಹಿಡಿಶಾಪ
120 ಕ್ಕೂ ಅಧಿಕ ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಬಾಗಲಕೋಟೆ ಜಿಲ್ಲೆಯ ಐಹೊಳೆ ಗ್ರಾಮವನ್ನು ಇತ್ತ ಸಂಪೂರ್ಣವಾಗಿ ಸ್ಥಳಾಂತರಿಸದ, ಅತ್ತ ದುರಸ್ಥಿಗೆ ಅನುಮತಿ ನೀಡದ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆ ಐಹೊಳೆ ಗ್ರಾಮದಲ್ಲಿ ಚಾಲುಕ್ಯರ 120ಕ್ಕೂ ಅಧಿಕ ಸ್ಮಾರಕಗಳಿವೆ. ಇವುಗಳ ಸಂರಕ್ಷಣೆ ಹಿನ್ನೆಲೆ ಮನೆಗಳ ನವೀಕರಣ ಹಾಗೂ ದುರಸ್ಥಿಗೆ ಪುರಾತತ್ವ ಇಲಾಖೆ ಅನುಮತಿಯನ್ನು ನೀಡುತ್ತಿಲ್ಲ. ಈ ಹಿನ್ನೆಲೆ ಗ್ರಾಮದಲ್ಲಿನ ಮನೆಗಳು ಶಿಥಿಲಾವಸ್ಥೆಗೆ ತಲುಪಿವೆ.
ಸರ್ಕಾರ ಕೇವಲ ಮೊದಲ ಹಂತವಾಗಿ 120 ಮನೆಗಳ ಸ್ಥಳಾಂತರಕ್ಕೆ ಸರ್ಕಾರ ಸಿದ್ದತೆ ನಡೆಸಿದೆ. ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್ ಅವರು 2 ವರ್ಷದ ಹಿಂದೆಯೇ ಈ ಕುರಿತು ಭೇಟಿ ನೀಡಿ ಚರ್ಚಿಸಿದ್ದರು. ಆದರೇ ಗ್ರಾಮಸ್ಥರು ಈಡೀ ಐಹೊಳೆ ಗ್ರಾಮದ 800 ಮನೆಗಳನ್ನ ಒಂದೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ