Breaking News

ತಗ್ಗಿದ ಮಳೆ 3 ಬ್ಯಾರೇಜಗಳು ಸಂಚಾರಕ್ಕೆ ಮುಕ್ತ

Spread the love

ಚಿಕ್ಕೋಡಿ:ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರ ಕಡಿಮೆಯಾಗಿದ್ದು,ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ನದಿಗಳ ನೀರಿನ ಮಟ್ಟ ಇಳಿಕೆಯಾಗುತ್ತಿದೆ.ಪರಿಣಾಮ 4 ಬ್ಯಾರೇಜಗಳು ಸಂಚಾರಕ್ಕೆ ‌ಮುಕ್ತವಾಗಿವೆ.
ನದಿಗಳ ಮಟ್ಟ ಕ್ಷೀಣಿಸಿದ್ದು ಕೃಷ್ಣಾ ನದಿಯ ಯಡೂರ-ಕಲ್ಲೋಳ,ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ ವೇದಗಂಗಾ ನದಿಯ ಅಕ್ಕೋಳ-ಸಿದ್ನಾಳ ಮತ್ತು ಭೋಜವಾಡಿ-ಶಿವಾಪುರ ಬ್ಯಾರೇಜ್‌ಗಳು ಸಂಚಾರಕ್ಕೆ ಮುಕ್ತಗೊಂಡಿವೆ. ದೂಧಗಂಗಾ ನದಿಗೆ 7,040 ಕ್ಯೂಸೆಕ್ ಮತ್ತು ಕೃಷ್ಣಾ ನದಿಗೆ 26,415 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ನದಿಗಳು ಒಡಲು ತುಂಬಿ ಹರಿಯುತ್ತಿವೆ.
ವೇದಗಂಗಾ ನದಿಯ ಬಾರವಾಡ-ಕುನ್ನೂರ,ಕೃಷ್ಣಾ ನದಿಯ ಮಾಂಜರಿ-ಬಾವನಸೌಂದತ್ತಿ ಬ್ಯಾರೇಜ್ ಗಳು ಇನ್ನೂ ಜಲಾವೃತಗೊಂಡಿವೆ. ನಾಳೆಯವರೆಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ.

Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ