ಆನೇಕಲ್(ಬೆಂಗಳೂರು): ರಾಜ್ಯದಲ್ಲಿ ಇತ್ತೀಚೆಗೆ ಹಗಲು ದರೋಡೆಗಳು ಹೆಚ್ಚಾಗುತ್ತಿದ್ದು, ಒಂಟಿ ಮಹಿಳೆಯರು ಸಿಕ್ಕಿದ್ರೆ ಸಾಕು ಯಾವುದೋ ನೆಪ ಹೇಳಿ ಕಳ್ಳರು ಚಿನ್ನಾಭರಣವನ್ನು ಕದ್ದು ಪರಾರಿಯಾಗುತ್ತಾರೆ. ಇದೀಗ ಅಂತಹದ್ದೇ ಒಂದು ಘಟನೆ ತಾಲೂಕಿನ ಕೆಂಪಡ್ರಹಳ್ಳಿಯಲ್ಲಿ ನಡೆದಿದೆ.
ಕೆಂಪಡ್ರಹಳ್ಳಿ ತೋಟದಲ್ಲಿ ಕೆಲಸ ಮುಗಿಸಿ ಒಬ್ಬಂಟಿಯಾಗಿ ಬರುತ್ತಿದ್ದ ಸಾವಿತ್ರಮ್ಮನನ್ನು ಕಂಡು ಇಬ್ಬರು ದಂಪತಿ ಅಡ್ರೆಸ್ಸ್ ಕೇಳುವ ನೆಪದಲ್ಲಿ ವೃದ್ಧೆಯ ಬಳಿ ತಮ್ಮ ಸ್ಕೂಟಿಯನ್ನು ನಿಲ್ಲಿಸಿದ್ದಾರೆ. ಬಳಿಕ ಅಡ್ರೆಸ್ಸ್ ಕೇಳಿ ಆಕೆಯೊಂದಿಗೆ ಇನ್ನಷ್ಟು ಸಮಯ ಮಾತನಾಡಿದ್ದಾರೆ.ಚಿನ್ನವನ್ನು ಹೀಗೆಲ್ಲ ಹಾಕಿಕೊಂಡು ಹೋಗಬಾರದು, ಅದನ್ನು ತೆಗೆದುಕೊಡಿ. ಪ್ಯಾಕ್ ಮಾಡುವೆ ಎಂದು ಹೇಳಿ ವೃದ್ದೆಯನ್ನು ನಂಬಿಸಿದ ದಂಪತಿ, ಆಕೆಯ ಕೈಗೆ ಕಲ್ಲನ್ನು ಕೊಟ್ಟು ನಂತರ ಪ್ರಜ್ಞೆ ತಪ್ಪಿಸಿ, ಅವರ ಬಳಿ ಇದ್ದ 40 ಗ್ರಾಂನ ಎರಡೂವರೆ ಲಕ್ಷ ಮೌಲ್ಯದ ಸರ ಹಾಗೂ ಕಿವಿಯ ಓಲೆ ಕದ್ದು ಎಸ್ಕೇಪ್ ಆಗಿದ್ದಾರೆ.ದಂಪತಿ ವೃದ್ಧೆಯ ಚಿನ್ನವನ್ನು ಕದ್ದು ಪರಾರಿಯಾಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.