ಬೆಳಗಾವಿಯ ದಂಡು ಮಂಡಳಿಯ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರ
ಮನೆಯೇ ಮೊದಲ ಪಾಠ ಶಾಲೆ; ಡಾ. ಗಿರೀಶ್ ಸೋಲವಾಲ್ಕರ್
ವಿದ್ಯಾರ್ಥಿಗಳಿಗೆ ಮನೆಯ ಮೊದಲ ಪಾಠ ಶಾಲೆಯಾಗಿರುತ್ತದೆ ಎಂದು ಡಾ. ಗಿರೀಶ್ ಸೋಲವಾಲ್ಕರ್ ಹೇಳಿದರು.
ಗುರುವಾರ ದಂಡು ಮಂಡಳಿ ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕೇವಲ ಪಠ್ಯದ ಅಭ್ಯಾಸ ಮಾಡಿಸುತ್ತಾರೆ. ಆದರೆ ನಿಜವಾಗಿಯೂ ಮನೆಯೇ ಮಕ್ಕಳಿಗೆ ಪಾಠ ಶಾಲೆಯಾಗಿದೆ.
ಮಕ್ಕಳಿಗೆ ಪೋಷಕರು ಉತ್ತಮ ಸಂಸ್ಕಾರ ನೀಡಿದರೆ ಶಾಲೆಯಲ್ಲಿ ಮಕ್ಕಳು ಮನಸ್ಸುಕೊಟ್ಟು ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ ಎಂದರು.
ದಂಡು ಮಂಡಳಿಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಸಮ್ಮರ್ ಕ್ಯಾಂಪ್ ಕೇವಲ ನಿಮ್ಮ ದೇಹಕ್ಕೆ ಮಾತ್ರವಲ್ಲ. ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ಎಲ್ಲ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಪ್ರಶಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
Laxmi News 24×7