Breaking News

ಸರ್ವರ್ ಡೌನ್ : ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಗುತ್ತಿಲ್ಲ ಕೆಲಸ

Spread the love

 : ಕಳೆದ 10 ದಿನಗಳಿಂದ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಯಾವುದೇ ಕೆಲಸ ಆಗದೇ ಜನರು ಪರದಾಡುತ್ತಿದ್ದಾರೆ.

ಚಾಮರಾಜನಗರದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಸರ್ವರ್ ಡೌನ್ ಆಗುತ್ತಿರುವುದರಿಂದ ಯಾವ ನೋಂದಣಿ ಕಾರ್ಯವೂ ಆಗದೇ ಜನರು ನಿತ್ಯ ಅಲೆದಾಡುತ್ತಿದ್ದಾರೆ. ಯಾವುದೇ ನೋಂದಣಿ ಆಗಲಿ, ಇಸಿಯಾಗಲಿ ಸಾಧ್ಯವಾಗದೆ ಜನರು ಪರದಾಡಿದ್ದು, ಕಳೆದ 10 ದಿನಗಳಿಂದಲೂ ಈ ಸಮಸ್ಯೆ ಮುಂದುವರೆದಿದೆ.

ರಾಜ್ಯಾದ್ಯಂತ ಸರ್ವರ್ ಸಮಸ್ಯೆ ತಲೆದೂರಿದ ಪರಿಣಾಮ ಈ ಅಡಚಣೆ ಉಂಟಾಗಿದೆ ಎಂದು‌ ಅಧಿಕಾರಿಗಳು‌ ತಿಳಿಸಿದ್ದಾರೆ. ಕಳೆದ 10 ದಿನಗಳಿಂದಲೂ ತಾಂತ್ರಿಕ ಸಮಸ್ಯೆ ಕಾರಣ ನೋಂದಣಿ ಪ್ರಕ್ರಿಯೆಗಳಾಗದೆ ಅಲೆದಾಡುತ್ತಿದ್ದಾರೆ.ಈ ಬಗ್ಗೆ ರಾಮಸಮುದ್ರ ನಿವಾಸಿ ಶಿವನಂಜಯ್ಯ ಅವರು ಮಾತನಾಡಿ, ”ಕೆಲ ದಿನಗಳಿಂದ ಸಬ್​ ರಿಜಿಸ್ಟ್ರಾರ್ ಆಫೀಸ್​ನಲ್ಲಿ ಯಾವುದೇ ಇಸಿಯಾಗಲಿ, ನೋಂದಣಿಯಾಗಲಿ ಆಗುತ್ತಿಲ್ಲ. ಇಡೀ ರಾಜ್ಯಾದ್ಯಂತ ಆಗಲ್ಲ ಎಂದು ನಮಗೆ ಸಬೂಬು ಹೇಳುತ್ತಿದ್ದಾರೆ. ದಯಮಾಡಿ ಇದನ್ನ ಸರಿಪಡಿಸಬೇಕೆಂದು ಸಾರ್ವಜನಿಕರ ಪರವಾಗಿ ಬೇಡಿಕೊಳ್ಳುತ್ತಿದ್ದೇವೆ”ಎಂದು ಹೇಳಿದರು.


Spread the love

About Laxminews 24x7

Check Also

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶ

Spread the loveಬೆಳಗಾವಿ: ಮಹಾನಗರ ಪಾಲಿಕೆಯ ತಿನಿಸು ಕಟ್ಟೆ ಮಳಿಗೆಗಳನ್ನು ತಮ್ಮ ಪತ್ನಿಯರ ಹೆಸರಿನಲ್ಲಿ ಪಡೆದ ಪ್ರಕರಣದಡಿ ಪಾಲಿಕೆಯ ಇಬ್ಬರು ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ