Breaking News

ಒಕ್ಕುಂದ ಗ್ರಾಮದ 10ನೇ ವರ್ಷದ ಉತ್ಸವ ಮೆರವಣಿಗೆಯಲ್ಲಿ ಗೊಂಬೆ ಮತ್ತು ಡೊಳ್ಳು ಕುಣಿತ ಗಮನ ಸೆಳೆದವು.

Spread the love

ಬೈಲಹೊಂಗಲ : ತಾಲೂಕಿನ ಒಕ್ಕುಂದ ಗ್ರಾಮದಲ್ಲಿ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ನಿಮಿತ್ತ ಶನಿವಾರ ಬೆಳಗ್ಗೆ ಅಮೋಘವರ್ಷ ನೃಪತುಂಗ ಜ್ಯೋತಿ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ಗೊಂಬೆ ಮತ್ತು ಡೊಳ್ಳು ಕುಣಿತ ಮೆರವಣಿಗೆಯಲ್ಲಿ ಗಮನ ಸೆಳೆದವು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಒಕ್ಕುಂದ ಗ್ರಾಮದ 10ನೇ ವರ್ಷದ ಉತ್ಸವ ಹಿನ್ನೆಲೆ ಮಲಪ್ರಭಾ ನದಿ ದಂಡೆಯ ಮೇಲೆ ನೃಪತುಂಗ ಜ್ಯೋತಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಪರಮಪೂಜ್ಯ ರಾಚೋಟಿ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮಕ್ಕಳ ಕುಣಿಸಿದ ಗೊಂಬೆಗಳು : ಮೆರವಣಿಗೆಯಲ್ಲಿ ಕಾರವಾರದ ‘ಗಾರುಡಿ ಗೊಂಬೆ’ ಕಲಾತಂಡದ ಗೊಂಬೆ ಕುಣಿತ ಎಲ್ಲರನ್ನು ಆಕರ್ಷಿತು. ಬೃಹದಾಕಾರದ ರಾಜ, ರಾಣಿ, ಮಂತ್ರಿ, ಗೂಳಿ ವೇಷದ ಗೊಂಬೆಗಳು ಹಾಗೂ ಗೊಂಬೆ ವೇಷಧಾರಿಗಳ ಹಾಸ್ಯ ನೆರೆದಿದ್ದ ಜನರ ಹುಬ್ಬೇರಿಸಿತು. ಗೊಂಬೆಗಳ ಜೊತೆಗೆ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ