Breaking News

ಸಾರಿಗೆ ನಿಗಮಗಳ ಪರಿಸ್ಥಿತಿ ಸುಧಾರಣೆ ಬಗ್ಗೆ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ (

Spread the love

ಬೆಂಗಳೂರು: ಸರ್ಕಾರ ವಾರ್ಷಿಕ 2,000 ಕೋಟಿ ರೂ. ಅನುದಾನ ನೀಡಿದರೆ ರಸ್ತೆ ಸಾರಿಗೆ ನಿಗಮಗಳ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.‌

ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ವಾರ್ಷಿಕ ರಸ್ತೆ ಸಾರಿಗೆ ನಿಗಮಗಳಿಗೆ 2,000 ಕೋಟಿ ಅನುದಾನ ನೀಡಿದರೆ ಪರಿಸ್ಥಿತಿ ಸುಧಾರಣೆ ಆಗಲಿದೆ. ಈಗ ವಾರ್ಷಿಕ 500-300 ಕೋಟಿ ರೂ. ವರೆಗೆ ಅನುದಾನ ನೀಡಲಾಗುತ್ತಿದೆ. ರಸ್ತೆ ಸಾರಿಗೆ ನಿಗಮಗಳ ಸುಧಾರಣೆ ಕ್ರಮಗಳ ಬಗ್ಗೆ ಆಯೋಗ ವರದಿ ನೀಡಿದೆ. ಇದರಲ್ಲಿ ಕೆಲವು ಪೂರಕವಾಗಿದ್ದರೆ, ಇನ್ನೂ ಕೆಲವು ಅನುಷ್ಠಾನ ಕಷ್ಟಸಾಧ್ಯ.‌ ಹೀಗಾಗಿ ಎರಡು ಸಾವಿರ ಕೋಟಿ ರೂ.‌ ವಾರ್ಷಿಕ ಅನುದಾನ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ.‌ ಈ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ನಾಲ್ಕು ರಸ್ತೆ ಸಾರಿಗೆ ನಿಗಮಗಳದವರು ಆರೇಳು ತಿಂಗಳಿಂದ ದರ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದರು. ಬಿಎಂಟಿಸಿಯಲ್ಲಿ 2014ರಲ್ಲಿ ದರ ಏರಿಕೆ ಮಾಡಲಾಗಿತ್ತು.‌ ಆಗಿನಿಂದ ದರ ಪರಿಷ್ಕರಣೆ ಮಾಡಿರಲಿಲ್ಲ. 2020ರಲ್ಲಿ ಬಿಎಂಟಿಸಿ ಹೊರತುಪಡಿಸಿ ಇತರ ರಸ್ತೆ ಸಾರಿಗೆ ನಿಗಮಗಳು ಶೇ.12 ದರ ಹೆಚ್ಚಳ ಮಾಡಿತ್ತು. ಆಗ ಡೀಸೆಲ್ ಬೆಲೆ ನಿತ್ಯ ₹ 9.16 ಕೋಟಿ ಖರ್ಚು ಆಗುತ್ತಿತ್ತು‌. ಈಗ ನಿತ್ಯ ₹ 13.21 ಕೋಟಿ ಖರ್ಚಾಗುತ್ತಿದೆ.‌ 2020ರಲ್ಲಿ ದಿ‌ನಕ್ಕೆ 12.85 ಕೋಟಿ ಖರ್ಚಾಗಿತ್ತು. ಈಗ ದಿನಕ್ಕೆ 18.36 ಕೋಟಿ ಖರ್ಚಾಗುತ್ತಿದೆ. ಬಿಜೆಪಿಯವರೇ ಇದ್ದಾಗ ಸುಮಾರು 5,900 ಕೋಟಿ ರೂ. ಸಾಲ ಇತ್ತು ಎಂದರು.

2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ 8.02% ಹೆಚ್ಚಿಸಲಾಗಿದೆ. ಆರ್. ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಒಟ್ಟು 7 ಬಾರಿ ಒಟ್ಟು 47.8% ರಷ್ಟು ಪ್ರಯಾಣ ದರವನ್ನು ಹೆಚ್ಚಿಸಲಾಗಿತ್ತು. ಕಾಂಗ್ರೆಸ್ ಅವಧಿ 2013-2015ರಲ್ಲಿ 18.46% ದಷ್ಟು ದರ ಹೆಚ್ಚಳ ಮಾಡಲಾಗಿತ್ತು. ಬಳಿಕ ನಾನು ಸಾರಿಗೆ ಸಚಿವನಾಗಿದ್ದಾಗ 2% ದರ ಕಡಿಮೆ ಮಾಡಿದ್ದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ 2020ರಲ್ಲಿ 12% ಎಷ್ಟು ದರ ಹೆಚ್ಚಳ ಮಾಡಲಾಗಿತ್ತು ಎಂದು ಅಂಕಿಅಂಶ ನೀಡಿದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ