Breaking News

ಬಿಜೆಪಿಯವರು ಎಲ್ಲರ ರಾಜೀನಾಮೆ ಕೇಳುತ್ತಾರೆ

Spread the love

ಬೆಂಗಳೂರು: ನಾವೆಲ್ಲರೂ ನಮ್ಮ ಇಲಾಖೆಯ ಕಾರ್ಯವೈಖರಿಯ ರಿಪೋರ್ಟ್ ಕಾರ್ಡ್ ಅನ್ನು ಹೈಕಮಾಂಡ್​​ಗೆ ನೀಡಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.‌

ಬೆಂಗಳೂರಲ್ಲಿ ಮಾತನಾಡಿದ ಅವರು, ಹೈಕಮಾಂಡ್ ನಮ್ಮ‌ ಬಳಿ ರಿಪೋರ್ಟ್ ಕೇಳಿತ್ತು, ಕೊಟ್ಟಿದ್ದೇವೆ. ಇಲಾಖೆಯ ಕೆಲಸ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕೇಳಿದ್ದರು. ಸಚಿವರೆಲ್ಲರೂ ಅವರವರ ಕಾರ್ಯವೈಖರಿ ಬಗ್ಗೆ ವರದಿ ನೀಡಿದ್ದಾರೆ ಎಂದರು.

ಸಚಿವ ಸಂಪುಟ ಪುನರ್​​ರಚನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಬಳಿಯೇ ನೀವು ಕೇಳಬೇಕು. ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.

ಬಿಜೆಪಿಯವರು ಎಲ್ಲರ ರಾಜೀನಾಮೆ ಕೇಳುತ್ತಾರೆ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ‌ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಆರೋಪ ನಿಜ ಆದರೆ ನೋಡೋಣ. ಮೊದಲು ತನಿಖೆ ಆಗಬೇಕು. ಬಿಜೆಪಿಯವರು ಎಲ್ಲರ ರಾಜೀನಾಮೆ ಕೇಳುತ್ತಾರೆ. ಆಗ ಮಂತ್ರಿ ಮಂಡಲವೇ ಖಾಲಿ ಆಗುತ್ತೆ. ಎಲ್ಲವೂ ಸಿಬಿಐ ತನಿಖೆಗೆ ಕೇಳ್ತಾರೆ, ಅವರು ಹೇಳಿದ ಹಾಗೆ ಮಾಡುವುದಕ್ಕೆ ಆಗುವುದಿಲ್ಲ ಎಂದು ತಿರುಗೇಟು ನೀಡಿದರು.

ಸಚಿನ್ ಪಾಂಚಾಳ್ ಗುತ್ತಿಗೆದಾರ ಅಲ್ಲ ಎಂಬ ವಿಚಾರವಾಗಿ ಮಾತನಾಡಿ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವ ಕಾಮಗಾರಿ ಟೆಂಡರ್ ಆಗಿದೆ. ಬಾಕಿ ಬಿಲ್ ಏನಿದೆ ಎಂಬ ಮಾಹಿತಿಯೂ ಇಲ್ಲ. ವಿಚಾರಣೆ ಬಳಿಕ ಎಲ್ಲವೂ ಹೊರಗಡೆ ಬರಲಿ ಎಂದು ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ