Breaking News

ಬೆಳಗಾವಿಯಲ್ಲಿ ಸ್ಟೇಡಿಯಂ ನಿರ್ಮಿಸಬೇಕೆಂದು ಆಗ್ರಹಿಸಿದ ದಕ್ಷಿಣ ಶಾಸಕ ಅಭಯ ಪಾಟೀಲ್ಅಭಿನಂದಿಸಲಾಯಿತು.

Spread the love

ಸದನದಲ್ಲಿ ಕ್ರೀಡಾಳುಗಳ ಕುರಿತು ಚರ್ಚಿಸಿ ಶಾಸಕ ಅಭಯ ಪಾಟೀಲ್; ಸ್ಕೇಟಿಂಗ್ ತರಬೇತುದಾರರಿಂದ ಸನ್ಮಾನ
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬೆಳಗಾವಿಯ ಕ್ರೀಡಾಳುಗಳ ಸಮಸ್ಯೆಯ ಕುರಿತು ಧ್ವನಿ ಎತ್ತಿ, ಬೆಳಗಾವಿಯಲ್ಲಿ ಸ್ಟೇಡಿಯಂ ನಿರ್ಮಿಸಬೇಕೆಂದು ಆಗ್ರಹಿಸಿದ ದಕ್ಷಿಣ ಶಾಸಕ ಅಭಯ ಪಾಟೀಲ್ ಅವರನ್ನು ಬೆಲಗಾಮ್ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮತ್ತು ಆಭಾ ಸ್ಫೋರ್ಟ್ಸ್ ಕ್ಲಬನ ವತಿಯಿಂದ ಸತ್ಮರಿಸಿ ಅಭಿನಂದಿಸಲಾಯಿತು.

ಇದು ವರೆಗೂ ನಡೆದ ಅಧಿವೇಶನದಲ್ಲಿ ಕ್ರೀಡೆ ಮತ್ತು ಕ್ರೀಡಾಳುಗಳ ಕುರಿತು ಯಾವ ಶಾಸಕರು ಧ್ವನಿಯನ್ನು ಎತ್ತಿಲ್ಲ. ಆದರೇ ಸದನದಲ್ಲಿ ಕ್ರೀಡಾಳುಗಳ ಸಮಸ್ಯೆಯ ಕುರಿತು ಧ್ವನಿ ಎತ್ತಿ, ಬೆಳಗಾವಿಯಲ್ಲಿ ಸ್ಟೇಡಿಯಂ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ. ಆದ್ದರಿಂದ ಬೆಲಗಾಮ್ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮತ್ತು ಆಭಾ ಸ್ಫೋರ್ಟ್ಸ್ ಕ್ಲಬನ ವತಿಯಿಂದ ಸ್ಕೇಟಿಂಗ್ ತರಬೇತುದಾರ ಸೂರ್ಯಕಾಂತ್ ಹಿಂಡಲಗೇಕರ ಅವರು ಶಾಸಕ ಅಭಯ ಪಾಟೀಲರನ್ನು ಸತ್ಕರಿಸಿದರು.

ಈ ವೇಳೆ ಉಪಮಹಾಪೌರ ಆನಂದ ಚವ್ಹಾಣ, ನಗರಸೇವಕ ನಿತೀನ್ ಜಾಧವ್, ಗಿರೀಶ್ ಧೋಂಗಡಿ, ಮಂಗೇಶ ಪವಾರ್, ಅಭಿಜೀತ್ ಜವಳಕರ, ಶ್ರೀಶೈಲ್ ಕಾಂಬಳೆ, ಗೀತಾ ಸುತಾರ, ಸರೀತಾ ಪಾಟೀಲ್, ವಾಣಿ ಜೋಶಿ, ನಂದು ಮೀರಜಕರ್, ವಿನಾಯಕ ಕಾಮಕರ, ಸಾರಂಗ ರಾಘೋಚೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.


Spread the love

About Laxminews 24x7

Check Also

ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ

Spread the loveಶಿವಮೊಗ್ಗ: ಮದುವೆಯಾದ ಎರಡೇ ತಿಂಗಳಿಗೆ ನವಾವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸೊರಬತಾಲೂಕಿನ ಹಣಜಿ ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ