Breaking News

ಬಿಜೆಪಿ ಮುಖಂಡನೊಬ್ಬನ ಕರ್ಮಕಾಂಡ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ಖೊಟ್ಟಿ ನೌಕರಿ ಆದೇಶ

Spread the love

ಬಿಜೆಪಿ ಮುಖಂಡನೊಬ್ಬನ ಕರ್ಮಕಾಂಡ ಬಯಲು.

ಈತ ಖಾನಾಪುರದ ಬಿಜೆಪಿ ಮುಖಂಡ ಹಾಗೂ ಶಾಸಕರ ಆಪ್ತ ಆಕಾಶ ಅಥಣಿಕರ್.

ಸಾರ್ವಜನಿಕರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ಖೊಟ್ಟಿ ನೌಕರಿ ಆದೇಶ ಪತ್ರಗಳನ್ನು ತಯಾರಿಸಿ ಕೊಟ್ಟು ಜನರನ್ನು ಯಾಮಾರಿಸುವುದೇ ಈ ಮಹಾನುಭಾವನ ಕಾಯಕ.

ಖಾನಾಪುರ ತಾಲ್ಲೂಕಿನ ಶ್ರೀಮತಿ ಶೀತಲ ಪಾಟೀಲ ಎಂಬ ಮಹಿಳೆಗೆ ಅಂಗನವಾಡಿ ಕಾರ್ಯಕರ್ತೆಯ ನೌಕರಿ ಕೊಡಿಸುವುದಾಗಿ ನಂಬಿಸಿ ಆಕೆಯಿಂದ 30000/- ಹಣ ಪಡೆದುಕೊಂಡು ಖೊಟ್ಟಿ ಆದೇಶ ಪ್ರತಿಯನ್ನು ತಯಾರಿಸಿ ಕೊಟ್ಟಿದ್ದು ಆ ಮಹಿಳೆ ನೀಡಿದ ದೂರಿನನ್ವಯ ಈತನ ಮೇಲೆ 420 ಪ್ರಕರಣ ದಾಖಲಾಗಿದೆ.

ಬಿಜೆಪಿಯ ಕಾನೂನು ಪ್ರಕೋಷ್ಟದ ಸಂಚಾಲಕನಾಗಿರುವ ಈತ ಇನ್ನೂ ಅದೆಷ್ಟು ಜನರನ್ನು ಯಾಮಾರಿಸಿದ್ದಾನೋ ದೇವ್ರೇ ಬಲ್ಲ.

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ