Breaking News

ಸತ್ತವರ ಹೆಸರಿನಲ್ಲಿನ ನೂರು ಕೋಟಿ ಆಸ್ತಿಯನ್ನು BSY ಕೈಯಲ್ಲಿ HDK ಡಿನೋಟಿಫೈ: ಕೃಷ್ಣ ಭೈರೇಗೌಡ ಗಂಭೀರ ಆರೋಪ

Spread the love

ಬೆಂಗಳೂರು: ಸತ್ತವರ ಹೆಸರಿನಲ್ಲಿ ನೂರು ಕೋಟಿ ಬೆಳೆಬಾಳುವ ಆಸ್ತಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈಯಲ್ಲಿ ಡಿ ನೋಟಿಫೈ ಮಾಡಿಸಿದ ಹೆಚ್ ಡಿ ಕುಮಾರಸ್ವಾಮಿ ಎಂಬುದಾಗಿ ಸಚಿವ ಕೃಷ್ಣಭೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಅಕ್ರಮದಲ್ಲಿ ಕುಮಾರಸ್ವಾಮಿ-ಯಡಿಯೂರಪ್ಪ ಜಂಟಿಯಾಗಿ ಬಾಗಿಯಾಗಿದ್ದಾರೆ.

ಕುಮಾರಸ್ವಾಮಿ ಆದೇಶ ಯಡಿಯೂರಪ್ಪ ಅವಧಿಯಲ್ಲಿ ಡಿನೋಟಿಫೈ ಮಾಡಲಾಗಿದೆ. ಈ ಮೂಲಕ ನೂರಾರು ಕೋಟಿ ಆಸ್ತಿ ಕುಮಾರಸ್ವಾಮಿ ಬಾಮೈದನ ಪಾಲಾಗಿದೆ ಎಂಬುದಾಗಿ ಆರೋಪಿಸಿದರು.

ಬಡವರ ನಿವೇಶನಗಳಿಗೆ ಹಂಚಿಕೆಯಾಗಿದ್ದ ಜಮೀನಿನ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ ಇಬ್ಬರು ಸೇರಿಕೊಂಡು ವ್ಯವಸ್ಥಿತ ಲೂಟಿ ಮಾಡಿದ್ದಾರೆ. ಅಲ್ಲದೇ ಅಧಿಕಾರಿಗಳ ಅಭಿಪ್ರಾಯ ದಿಕ್ಕರಿಸಿ ಬಿಎಸ್ ಯಡಿಯೂರಪ್ಪ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಹೇಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ