Breaking News

ಧರ್ಮಸ್ಥಳ ಸಂಘದಿಂದ ಕಿರುಕುಳ ಆರೋಪ: ಸಾಲದ ಕಂತು ಕಟ್ಟಲಾಗದೇ ರೈತ ಮಹಿಳೆ ಸಾವು

Spread the love

ಮಂಡ್ಯ, ಸೆಪ್ಟೆಂಬರ್‌ 19: ಸಂಘದ ಸಾಲದ ಕಂತು ಕಟ್ಟಲಾಗದೇ ರೈತ ಮಹಿಳೆ ಸಾವಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಲಿಯೂರು ಗ್ರಾಮದಲ್ಲಿ ನಡೆದಿದೆ. ಮಲಿಯೂರು ಗ್ರಾಮದ ಮಹಾಲಕ್ಷ್ಮೀ (38) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಧರ್ಮಸ್ಥಳ ಸಂಘದ ಸಾಲದ ಕಂತು ಕಟ್ಟಲಾಗದೇ ಕಿರುಕುಳ ತಾಳಲಾರದೇ ಮಹಿಳೆ ಸಾವಿಗೆ ಶರಣಾದ ಆರೋಪ ಕೇಳಿಬಂದಿದೆ.

 

ಮಲಿಯೂರು ಗ್ರಾಮದ ಮಹಾಲಕ್ಷ್ಮೀ ಕೆಲವು ಸಮಯದ ಹಿಂದೆ ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಪ್ರತಿ ಬುಧವಾರ 1,700 ರೂಪಾಯಿ ಕಂತು ಕಟ್ಟಬೇಕಿತ್ತು. ಈ ವಾರ ಅಂದರೆ ನಿನ್ನೆ ಸಂಘದ ಸಾಲದ ಕಂತು ಕಟ್ಟಲು ಹಣದ ಕೊರೆತೆಯಾಗಿತ್ತು. ಹೀಗಾಗಿ ಮಹಾಲಕ್ಷ್ಮೀ ಹಣ ಕಟ್ಟಲು ಸಮಯಾವಕಾಶ ಕೇಳಿದ್ದರು. ಆದರೆ ಧರ್ಮಸ್ಥಳ ಸಂಘದ ಸಿಬ್ಬಂದಿ ಮಹಿಳೆಗೆ ಅವಕಾಶ ನೀಡದೇ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ