ವಾರದ ಮೊದಲ ದಿನವಾದ ಇಂದು ಸೆಪ್ಟೆಂಬರ್ 16 ಸೋಮವಾರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ ಬೆಲೆ ಇಳಿಕೆ ತುಂಬಾ ಕಡಿಮೆಯಾಗಿದೆ. ಇಂದು ದೇಶದ ಬಹುತೇಕ ಎಲ್ಲಾ ನಗರಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 74,500 ರೂಪಾಯಿ ಇದೆ. 22ಕ್ಯಾರೆಟ್ ಚಿನ್ನದ ದರ 78,500 ದಾಟಿದೆ.
18 ಕ್ಯಾರೆಟ್ ಚಿನ್ನದ ದರವೂ 59000 ಆಸುಪಾಸಿನಲ್ಲಿ ವಹಿವಾಟಾಗುತ್ತಿದೆ. ಬೆಳ್ಳಿ ದರ ಕೆಜಿಗೆ 91,900 ರೂಪಾಯಿ ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 68,640 ರೂಪಾಯಿ ಇದ್ದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 74,880 ರೂಪಾಯಿ ಇದೆ. ಹಾಗಾದರೆ ದೇಶದ ದೊಡ್ಡ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ದರ ಎಷ್ಟು ಎಂದು ತಿಳಿಯೋಣ.