ಮಂಡ್ಯ: ‘ಶಾಸಕ ಮುನಿರತ್ನ ಅವರು ದಲಿತ ನಿಂದನೆ ಮಾಡಿರುವುದು ಸಾಕ್ಷಿ ಸಮೇತ ಸಿಕ್ಕಿರುವುದರಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಬಂಧಿಸಿದ್ದು, ಜಾಮೀನು ನೀಡಬಾರದು. ಶಾಸಕ ಸ್ಥಾನದಿಂದಲೂ ವಜಾ ಮಾಡಬೇಕು ಎಂದು ನಗರದ ಎಸ್ಪಿ ಕಚೇರಿ ಸರ್ಕಲ್ ಇನ್‌ಸ್ಪೆಕ್ಟರ್ ಯಶ್ವಂತ್ ಮೂಲಕ ಭಾನುವಾರ ಕಾಂಗ್ರೆಸ್ ಸಮಿತಿ(ಪರಿಶಿಷ್ಟ ಜಾತಿ ವಿಭಾಗ) ಕಾರ್ಯಕರ್ತರು ಸರ್ಕಾರಕ್ಕೆ ಮನವಿ ನೀಡಿದರು.
ದಲಿತ(ಹೊಲೆಯ) ಮತ್ತು ಒಕ್ಕಲಿಗ ಜಾತಿ ಪದಗಳನ್ನು ಬಳಿಸಿ ಮುನಿರತ್ನ ಅವರು ಮಾತನಾಡಿರುವುದನ್ನು ಆಧರಿಸಿ, ಪರಿಶಿಷ್ಟ ಜಾತಿ 1986 ತಡೆ ಕಾಯ್ದೆ 1956 ಮತ್ತು 1989 ಅಡಿಯಲ್ಲಿ ದೂರು ದಾಖಲಿಸಬೇಕು. ಸಾಮಾಜಿಕ ಜಾಲತಾಣದಲ್ಲಿಯೂ ಈ ಆಡಿಯೊ ಹರಿದಾಡುತ್ತಿದೆ ಎಂದು ಆರೋಪಿಸಿದರು.
Laxmi News 24×7