Breaking News

ಹುಕ್ಕೇರಿ: ಉದ್ಘಾಟನೆಗೆ ಸಜ್ಜಾದ ‘ಸುವರ್ಣ ಕರ್ನಾಟಕ ಭವನ’

Spread the love

ಹುಕ್ಕೇರಿ: ಇಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಸುಸಜ್ಜಿತ ಸಭಾಂಗಣ ಹುಡುಕುವುದೇ ಸಂಘಟಕರು ಹಾಗೂ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಇನ್ಮುಂದೆ ಆ ಕೊರತೆ ನೀಗಲಿದೆ. ಅನಿವಾರ್ಯವಾಗಿ ಅವರು ಖಾಸಗಿ ಸಭಾಂಗಣಗಳತ್ತ ಮುಖಮಾಡುವುದು ತಪ್ಪಲಿದೆ.

 

ಪಟ್ಟಣದ ಹೊರವಲಯದ ಕ್ಯಾರಗುಡ್ಡದ ಕಾಲೇಜು ಕ್ಯಾಂಪಸ್ ಬಳಿ ತಲೆ ಎತ್ತಿರುವ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ ಉದ್ಘಾಟನೆಗೆ ಸಜ್ಜಾಗಿದ್ದು, ಶೀಘ್ರವೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

ಹುಕ್ಕೇರಿಗೆ ಮಂಜೂರಾಗಿದ್ದ ಈ ಭವನದ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿತ್ತು. ಆಗ ಕ್ಷೇತ್ರದ ಶಾಸಕರಾಗಿದ್ದ ದಿ.ಉಮೇಶ ಕತ್ತಿ ಕಾಮಗಾರಿಗೆ ಇರುವ ಎಲ್ಲ ತೊಡುಕುಗಳನ್ನು ನಿವಾರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ₹4 ಕೋಟಿ ಅನುದಾನ ಬಳಸಿಕೊಂಡು ಹಂತ -ಹಂತವಾಗಿ ನಡೆದ ಭವನದ ಕಾಮಗಾರಿ ಈಗ ಪೂರ್ಣಗೊಂಡಿದೆ. ರಾಷ್ಟ್ರ, ರಾಜ್ಯ, ವಿಭಾಗೀಯ ಮತ್ತು ಸ್ಥಳೀಯಮಟ್ಟದ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಸಂಘಟಕರಿಗೆ ಸುಸಜ್ಜಿತ ಭವನ ಸಿಕ್ಕಂತಾಗಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ