Breaking News

ಹೋಟೆಲ್ ನಲ್ಲಿ ಕುಕ್ಕರ್ ಸ್ಫೋಟ: 9 ಜನರಿಗೆ ಗಂಭೀರ ಗಾಯ

Spread the love

ಬೆಳಗಾವಿ: ಹೋಟೆಲ್ ನಲ್ಲಿ ಕುಕ್ಕರ್ ಸ್ಫೋಟಗೊಂಡು 9 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ.

ಸವದತ್ತಿಗೆ ದೇವರ ದರ್ಶನಕ್ಕೆಂದು ಬಂದಿದ್ದ ಭಕ್ತರು ಹೋಟೆಲ್ ನಲ್ಲಿ ತಂಗಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾದಗಿರಿಯ ಐವರು ಹಾಗೂ ಬೆಂಗಳೂರಿನ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

 

ದೇವರ ದರ್ಶನಕ್ಕೆ ಬಂದಿದ್ದ ಭಕ್ತರು ಸವದತ್ತಿ ಪಟ್ಟಣದ ಹೋಟೆಲ್ ರೂಂ ನಲ್ಲಿ ತಂಗಿದ್ದರು. ಈ ವೇಳೆ ಹೋಟೆಲ್ ರೂಂ ನಲ್ಲಿ ಹೋಳಿಗೆ ಮಾಡಲೆಂದು ಕುಕ್ಕರ್ ನಲ್ಲಿ ಬೇಳೆ ಇಟ್ಟಿದ್ದಾರೆ. ಆದರೆ ಬೇಳೆಗೆ ನೀರು ಹಾಕಿ ಇಡುವುದನ್ನು ಮರೆತಿದ್ದಾರೆ. ಈ ವೇಳೆ ಕುಕ್ಕರ್ ಏಕಾಏಕಿ ಸ್ಫೋಟಗೊಂಡು, ಹೋಟೆಲ್ ಗೆ ಬೆಂಕಿ ಆವರಿಸಿದೆ. ಘಟನೆಯಲ್ಲಿ 9 ಜನರು ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಾಯಾಳುಗಳಲ್ಲಿ 6 ಜನರನ್ನು ಸವದತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ