Breaking News

ವಯನಾಡ್‌ ಭೂಕುಸಿತ: ಕೊಡಗು ಜಿಲ್ಲೆಯ ಯುವತಿ ಮೃತದೇಹ ಪತ್ತೆ

Spread the love

ಸಿದ್ದಾಪುರ: ವಯನಾಡು ಭೂಕುಸಿತ ದುರಂತದಲ್ಲಿ ನಾಪಯ್ತೆಯಾಗಿದ್ದ ಕೊಡಗಿನ ನೆಲ್ಯಹುದಿಕೇರಿ ಮೂಲದ ಯುವತಿ ಹಾಗೂ ಕುಟುಂಬದ ಮೃತದೇಹ ಶುಕ್ರವಾರ ಪತ್ತೆಯಾಗಿದೆ.

ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಮಗಳು ದಿವ್ಯಾ (35) ಚೂರಲ್ ಮಲ ಗೆ ವಿವಾಹವಾಗಿದ್ದರು.

ಭೂಕುಸಿತದಲ್ಲಿ ದಿವ್ಯಾ ಸೇರಿದಂತೆ ಕುಟುಂಬದ 9 ಮಂದಿ ನಾಪತ್ತೆಯಾಗಿದ್ದರು. ಮಗಳು ಹಾಗೂ ಕುಟುಂಬಸ್ಥರನ್ನು ಹುಡುಕಿಕೊಡುವಂತೆ ಪೊನ್ನಮ್ಮ ಮನವಿ ಮಾಡಿದ್ದರು. ಶುಕ್ರವಾರ ಸಂಜೆ ಕುಟುಂಬದ 9 ಮಂದಿಯ ಪೈಕಿ 8 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ದಿವ್ಯಾ ಹಾಗೂ‌ ಮಗ ಲಕ್ಷಿತ್ ಮೃತದೇಹ ಒಟ್ಟಿಗೆ ಪತ್ತೆಯಾಗಿದೆ. ದಿವ್ಯಾ ವಯನಾಡುವಿನ ಮಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ