Breaking News

ತೋಟದಲ್ಲಿ ಮೊಸಳೆ ಕುಟುಂಬ

Spread the love

ಚಿಕ್ಕೋಡಿ: ತಾಲ್ಲೂಕಿನ ಕಲ್ಲೋಳ ಗ್ರಾಮದ ಹೊರ ವಲಯದಲ್ಲಿ ಕೃಷ್ಣಾ ಹಾಗೂ ದೂಧಗಂಗಾ ನದಿ ದಡದ ಗ್ರಾಮಗಳಲ್ಲಿ ಮತ್ತೆ ಮೊಸಳೆ ಉಪಟಳ ಹೆಚ್ಚಾಗಿದೆ. ಪ್ರತಿ ಬಾರಿ ಮುಂಗಾರು ಮಳೆ ಆರಂಭಕ್ಕೆ ಕೃಷ್ಣಾ ನದಿ ನೀರಿನೊಂದಿಗೆ ಹರಿದುಬರುವ ಮೊಸಳೆಗಳು ಗ್ರಾಮಸ್ಥರ ನಿದ್ದೆಗೆಡಿಸಿವೆ.

ಚಿಕ್ಕೋಡಿ | ತೋಟದಲ್ಲಿ ಮೊಸಳೆ ಕುಟುಂಬ: ಆತಂಕ

ಸಂಗಮ ಸ್ಥಳದಿಂದ 500 ಮೀಟರ್ ದೂರದಲ್ಲಿ ಒಂದು ಹೆಣ್ಣು ಹಾಗೂ ಒಂದು ಗಂಡು ಮೊಸಳೆ ಪತ್ತೆಯಾಗಿವೆ. ಅಲ್ಲದೇ ಏಳು ಮೊಸಳೆ ಮರಿಗಳು ಕೂಡ ಪತ್ತೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. 5-6 ತಿಂಗಳಿನಿಂದ ಇಲ್ಲಿಯೇ ಬೀಡು ಬಿಟ್ಟ ಅಂದಾಜು 6 ಅಡಿ ಉದ್ದದ ಎರಡು ಮೊಸಳೆಗಳು ಬೀಡು ಬಿಟ್ಟಿದ್ದವು. ಇದೀಗ ಬಾವಿಯ ಬಳಿಯಲ್ಲಿ ಪ್ರತಿ ದಿನ ಮೊಸಳೆ ಮರಿಗಳು ಹೊರ ಬರುತ್ತಿರುವುದರಿಂದ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ದಿನ ದೂಡುವಂತಾಗಿದೆ.

ಜೂನ್‌ 9 ರಂದು ನರಸು ಅವಟೆ ಎಂಬುವವರು ಬಾವಿಯಲ್ಲಿ 5 ಮೊಸಳೆ ಮರಿಗಳು ಪತ್ತೆಯಾಗಿದ್ದು, ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ 5 ಮೊಸಳೆ ಮರಿ ಗಳನ್ನು ಹತ್ತಿರದಲ್ಲಿಯೇ ಇರುವ ಕೃಷ್ಣಾ ನದಿಯಲ್ಲಿ ಬಿಟ್ಟು ಬಂದಿದ್ದಾರೆ ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ