Breaking News

ಕೊಲೆಯಾದ ರೇಣುಕಾಸ್ವಾಮಿ ಕೂಡ ದರ್ಶನ್ ಫ್ಯಾನ್​? ಪವಿತ್ರಾಗೆ ಅಶ್ಲೀಲ ಮೆಸೇಜ್​ ಮಾಡಲು ಅದೊಂದೆ ಕಾರಣವಂತೆ!

Spread the love

ಬೆಂಗಳೂರು: ಯಾರೂ ನಿರೀಕ್ಷಿಸದ ಘಟನೆಯೊಂದು ರಾಜ್ಯದಲ್ಲಿಂದು ನಡೆದಿದೆ. ಅಸಂಖ್ಯಾತ ಅಭಿಮಾನಿಗಳ ಬಳಗವನ್ನೇ ಹೊಂದಿರುವ ನಟ ದರ್ಶನ್​ ಕೊಲೆ ಪ್ರಕರಣವೊಂದರಲ್ಲಿ ಬಂಧನವಾಗಿದ್ದು, ಈ ಸುದ್ದಿ ರಾಜ್ಯಾದ್ಯಂತ ತಲ್ಲಣವನ್ನೇ ಸೃಷ್ಟಿ ಮಾಡಿದೆ.

ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಅವರ ಗೆಳತಿ ನಟಿ ಪವಿತ್ರಾ ಗೌಡರನ್ನು ಪೊಲೀಸರು ಬಂಧಿಸಿದ್ದಾರೆ.

ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮೀವೆಂಕಟೇಶ್ವರ ಬಡಾವಣೆಯ ನಿವಾಸಿ. ಜೂನ್​ 8ರಂದು ಮನೆಯಿಂದ ಹೊರಟ ರೇಣುಕಾಸ್ವಾಮಿ ಮತ್ತೆ ವಾಪಸ್​ ಮನೆಗೆ ಬರಲೇ ಇಲ್ಲ. ಇದರಿಂದ ಆತಂಕಗೊಂಡ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ಜೂನ್​ 9ರಂದು ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿದ್ದು, ಕೊಲೆಯಾಗಿರುವುದಾಗಿ ತಿಳಿದುಬಂದಿದೆ.

ರೇಣುಕಾಸ್ವಾಮಿ ಅಪೋಲೋ ಮೆಡಿಕಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 9ರಂದು ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್​ಮೆಂಟ್​​ ಹತ್ತಿರದ ಮೋರಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಅಪಾರ್ಟ್​ಮೆಂಟ್​ ಭದ್ರತಾ ಸಿಬ್ಬಂದಿ ರಾಮ್ ದೋರ್​​ ಜೀ ಎಂಬುವರು ಮೃತದೇಹ ಕಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮೋರಿಯ ಬಳಿ ವ್ಯಕ್ತಿಯೊಬ್ಬರು ಶವ ಪತ್ತೆಯಾಗಿದೆ ಎಂದು ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಅಪರಿಚಿತ ಶವ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಪೊಲೀಸರಿಗೆ ಪ್ರಕರಣದಲ್ಲಿ ಒಂದೊಂದೆ ಮಹತ್ವದ ಮಾಹಿತಿಗಳು ಸಿಗಲಾರಂಭಿಸಿದವು.ಕೊಲೆಯಾದ ರೇಣುಕಾಸ್ವಾಮಿ ಕೂಡ ದರ್ಶನ್ ಫ್ಯಾನ್​? ಪವಿತ್ರಾಗೆ ಅಶ್ಲೀಲ ಮೆಸೇಜ್​ ಮಾಡಲು ಅದೊಂದೆ ಕಾರಣವಂತೆ!

ಕೊಲೆಯಾದ ರೇಣುಕಾಸ್ವಾಮಿಯ ಮುಖ, ತಲೆ ಹಾಗೂ ಕಿವಿಯಲ್ಲಿ ರಕ್ತಗಾಯವಾಗಿರೋದು ಕಂಡು ಬಂದಿರುತ್ತದೆ. ಯಾರೋ‌ ಕೊಲೆ ಮಾಡಿ ತಂದು ಬಿಸಾಡಿರುವ ಅನುಮಾನ ಅಂತ ದೂರು ದಾಖಲಿಸಲಾಗಿತ್ತು. ಜೂನ್​ 8ರಂದು ಬೇರೆಡೆ ಕೊಲೆ ಮಾಡಲಾಗಿದೆ. ಜೂನ್​ 9ರಂದು ಮೃತದೇಹ ಸಿಕ್ಕಿದೆ. ಬಳಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನ ಮಾಡಲಾಗಿದೆ. ಕೊಲೆಯಾದ ರೇಣುಕಾಸ್ವಾಮಿಯ ಮುಖ, ತಲೆ ಹಾಗೂ ಕಿವಿಯಲ್ಲಿ ರಕ್ತಗಾಯವಾಗಿರೋದು ಕಂಡು ಬಂದಿರುತ್ತದೆ. ಯಾರೋ‌ ಕೊಲೆ ಮಾಡಿ ತಂದು ಬಿಸಾಡಿರುವ ಅನುಮಾನ ಅಂತ ದೂರು ದಾಖಲಿಸಲಾಗಿತ್ತು. ಜೂನ್​ 8ರಂದು ಬೇರೆಡೆ ಕೊಲೆ ಮಾಡಲಾಗಿದೆ. ಜೂನ್​ 9ರಂದು ಮೃತದೇಹ ಸಿಕ್ಕಿದೆ. ಬಳಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಪಶ್ವಿಮ ವಿಭಾಗದ ಡಿಸಿಪಿ ಗಿರೀಶ್​ ಹೇಳಿದ್ದಾರೆ.

ಆರೋಪಿಗಳು ದರ್ಶನ್​ ಹೆಸರನ್ನು ಬಹಿರಂಗಪಡಿಸಿದ್ದಾರೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ.

ರೇಣುಕಾಸ್ವಾಮಿ ಕೂಡ ದರ್ಶನ್​ ಅಭಿಮಾನಿ
ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾ ಪೋಸ್ಟ್​ಗೆ ಕೆಟ್ಟದಾಗಿ ಮೆಸೇಜ್​ ಮಾಡಿ, ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ದರ್ಶನ್​ ಮತ್ತು ಇನ್ನು ಕೆಲವರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಕೊಲೆಯಾದ ರೇಣುಕಾಸ್ವಾಮಿ ದರ್ಶನ್​ ಅಭಿಮಾನಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಪವಿತ್ರಾ ಗೌಡ, ದರ್ಶನ್​ ಬಾಳಲ್ಲಿ ಬಂದ ಬಳಿಕ ಪತ್ನಿ ವಿಜಯಲಕ್ಷ್ಮೀಯಿಂದ ದರ್ಶನ್​ ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ, ದರ್ಶನ್​ ಅವರ ಸುಂದರ ಸಂಸಾರ ಹಾಳಾಗಲು ಪವಿತ್ರಾ ಗೌಡ ಕಾರಣ ಎಂದು ತಿಳಿದು ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್​ ಮಾಡಿದ್ದರು ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ ದರ್ಶನ್​ ಬರ್ತಡೇ ಸಂದರ್ಭದಲ್ಲಿ ಪವಿತ್ರಾ ಗೌಡ ದರ್ಶನ್​ ಜತೆಗಿನ ಸಂಬಂಧವನ್ನು ಬಹಿರಂಗಪಡಿಸಿದ್ದರು. ಬಳಿಕ ಇದೇ ವಿಚಾರಕ್ಕೆ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ನಡುವೆ ವಾಗ್ವಾದ ಸಹ ನಡೆದಿತ್ತು. ಈ ಬೆಳವಣಿಗೆಯಿಂದಲೂ ರೇಣುಕಾಸ್ವಾಮಿ ಬೇಸರಗೊಂಡಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಪವಿತ್ರಾ ಗೌಡ ಪೋಸ್ಟ್​ಗೆ ಅಶ್ಲೀಲ ಮಸೇಜ್​ಗಳನ್ನು ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ಇಂದು ಮುಂಜಾನೆ ಮೈಸೂರಿನ ಫಾರ್ಮ್​ ಹೌಸ್​ನಲ್ಲಿ ದರ್ಶನ್​ ಅವರನ್ನು ವಶಕ್ಕೆ ಪಡೆದಿರುವ ಕಾಮಾಕ್ಷಿ ಠಾಣಾ ಪೊಲೀಸರು, ಮೈಸೂರಿನಿಂದ ಬೆಂಗಳೂರಿಗೆ ಕರೆತಂದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಕೊ`ಲೆ ಕೇಸ್​ನಲ್ಲಿ ಆರೋಪಿಗಳ ಜೊತೆ ದರ್ಶನ್​ ನಿರಂತರ ಸಂಪರ್ಕದಲ್ಲಿರುವ ಶಂಕೆಯು ವ್ಯಕ್ತವಾಗಿದೆ. ಆರೋಪಿಯ ವಿಚಾರಣೆ ವೇಳೆಯೂ ನಟ ದರ್ಶನ್ ಹೆಸರು ಬಾಯಿಬಿಟ್ಟಿದ್ದಾರೆಂದು ತಿಳಿದುಬಂದಿದೆ.


Spread the love

About Laxminews 24x7

Check Also

ನೀರಿನಲ್ಲಿ ಮುಳುಗಿ ತಾತ ಮತ್ತು ಮೊಮ್ಮಕ್ಕಳ ಜಲಸಮಾಧಿ

Spread the loveಮೈಸೂರು : ನೀರಿನಲ್ಲಿ ಮುಳುಗಿ ತಾತ ಮತ್ತು ಮೊಮ್ಮಕ್ಕಳು ಜಲಸಮಾಧಿಯಾಗಿರುವ ಘಟನೆ ತಿ. ನರಸೀಪುರ ಪಟ್ಟಣದಲ್ಲಿ ನಡೆದಿದೆ. ತಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ