Breaking News

ಸಿಎಂ, ಡಿಸಿಎಂ ಗೆ ನಾನು ಹೇಳುತ್ತೇನೆ : ದಿಂಗಾಲೇಶ್ವರಶ್ರೀ,

Spread the love

ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್​ ಚುನಾವಣೆ ನಡಯಲಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ದಿಂಗಾಲೇಶ್ವರ ಶ್ರೀಗಳು ಪೂರ್ಣ ಪ್ರಮಾಣದ ರಾಜಕೀಯ ಅಖಾಡಕ್ಕಿಳಿದ್ದಾರೆ. ಬಾಗಲಕೋಟೆಯ ಎಸ್‌.ಆರ್.ಪಾಟೀಲ್ ಪರ ಸ್ವಾಮೀಜಿ ಬ್ಯಾಟಿಂಗ್​ ಮಾಡಿದ್ದು, ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿರುವ ಎನ್ನಲಾದ ಸ್ಫೋಟಕ ಆಡಿಯೋ ಒಂದು ವೈರಲ್ ಆಗಿದೆ.

ಸಿಎಂ, ಡಿಸಿಎಂ ಗೆ ನಾನು ಹೇಳುತ್ತೇನೆ : ದಿಂಗಾಲೇಶ್ವರಶ್ರೀ, ಎಸ್.ಆರ್ ಪಾಟೀಲ್ ಮಾತನಾಡಿರುವ ಆಡಿಯೋ ವೈರಲ್!

ಹೌದು ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿರುವ ಎನ್ನಲಾದ ಸ್ಫೋಟಕ ಆಡಿಯೋದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಒಪ್ಪಿಸುತ್ತೇನೆ ಎಂದು ಸ್ಪೋಟಕ ಆಡಿಯೋ ಒಂದು ಹರಿದಾಡುತ್ತಿದೆ.

ನೀವು ಇದೊಂದು ಕೆಲಸ ಮಾಡಿನೋಡಿ ನೀವು ಮುಂದೆ ಸಿಎಂ ಆಗುವ ತನಕ ಏನೇನು ಕೆಲಸ ಮಾಡ್ತೀವಿ ನೋಡಿ’ ಎಂದಿರುವ ಸ್ವಾಮೀಜಿ. ನೀವು ಮಾಡಿ ತೋರಿಸಿ ಆಗ ನಾವು ಏನು ಇದೀವಿ ಅಂತಾ ತೋರಿಸುತ್ತೇವೆ ಎಂದಿರುವ ಶ್ರೀಗಳು. ಈ ಆಡಿಯೋದಿಂದಾಗಿ ಡಿಕೆ ಶಿವಕುಮಾರ ಒಕ್ಕಲಿಗ ಸಮುದಾಯದ ಜೊತೆಗೆ ಲಿಂಗಾಯತ ಸಮುದಾಯಕ್ಕೂ ಹತ್ತಿರವಾಗುತ್ತಿದ್ದಾರಾ? ಎಂಬ ಬಗ್ಗೆ ಇದೀಗ ಬಿಸಿ ಬಿಸಿ ಚರ್ಚೆ ಆಗ್ತಿದೆ.

ಒಕ್ಕಲಿಗ ಜೊತೆ ಲಿಂಗಾಯತ ಸಮುದಾಯಕ್ಕೂ ಹತ್ತಿರವಾಗುತ್ತಿದ್ದಾರಾ ಡಿಕೆ ಶಿವಕುಮಾರ್​? ನೀವು ಇದೊಂದು ಮಾಡಿ ತೋರಿಸಿ, ನಾವು ಏನು ಇದ್ದೀವೆಂದು ತೋರಿಸುತ್ತೇವೆ. ಡಿ.ಕೆ.ಶಿವಕುಮಾರ್​ರನ್ನು ಒಪ್ಪಿಸಿದ್ದೇನೆ ಎಂದಿದ್ದಾರೆ. ಡಿಕೆ ಶಿವಕುಮಾರ್​ ಬೆಂಬಲ ಇದೆ, ಸಿಎಂರದ್ದು ಸ್ವಲ್ಪ ಕಷ್ಟ ಇದೆ ಎಂದು ಎಸ್​ಆರ್​ ಪಾಟೀಲ್​ ಹೇಳಿದ್ದಾರೆ.


Spread the love

About Laxminews 24x7

Check Also

ನೀಟ್ ರದ್ಧತಿಗೆ ಮನನೊಂದು ಸರಣಿ ಆತ್ಮಹತ್ಯೆ – ನಾಲ್ವರು ಆಕಾಂಕ್ಷಿಗಳು ಸೂಸೈಡ್

Spread the loveನವದೆಹಲಿ: ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದುಗೊಂಡ ಹಿನ್ನೆಲೆ ಆಘಾತಕ್ಕೊಳಗಾಗಿ ನಾಲ್ವರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ