Breaking News

ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಅಂತಾ, ಸಚಿವ ಶ್ರೀರಾಮಲು, ಮತ್ತೊಂದು ಕಡೆ ರಮೇಶ್ ಜಾರಕಿಹೊಳಿ ಇಬ್ಬರು ನಾಯಕರಲ್ಲಿ ತೀವ್ರ ಪೈಪೋಟಿ

Spread the love

ಬೆಂಗಳೂರು : ಸಚಿವ ರಮೇಶ ಜಾರಕಿಹೊಳಿ ಈಗಿರುವ ಜಲಸಂಪನ್ಮೂಲ ಖಾತೆಯ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಅಂತಾ, ದೆಹಲಿ ಭೇಟಿ ವೇಳೆ ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಆಪರೇಷನ್ ಕಮಲ ವೇಳೆಯಲ್ಲಿ ಬಿಜೆಪಿ ನಾಯಕರು ಡಿಸಿಎಂ ಮಾಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ವಾಲ್ಮೀಕಿ ಕೋಟಾದಲ್ಲಾದ್ರೂ ಸರಿ, ಈ ಹಿಂದೆ ಮಾತು ಕೊಟ್ಟ ಮಾತಿನಂತೆ ಡಿಸಿಎಂ ಸ್ಥಾನ ಕೋಡಬೇಕು ಎಂದು ಮನವಿ ಮಾಡಿದ್ದಾರಂತೆ.

ಎರಡ್ಮೂರು ದಿನಗಳಲ್ಲಿ ಸಚಿವ ಸಂಪುಟ ಪುನಾರಚನೆಗೊಳ್ಳಲಿದ್ದು, ಡಿಸಿಎಂ ಸ್ಥಾನಕ್ಕಾಗಿ ವಾಲ್ಮೀಕಿ ಸಮುದಾಯದ ಒಂದು ಕಡೆ ಸಚಿವ ಶ್ರೀರಾಮಲು, ಮತ್ತೊಂದು ಕಡೆ ರಮೇಶ್ ಜಾರಕಿಹೊಳಿ ಇಬ್ಬರು ನಾಯಕರಲ್ಲಿ ತೀವ್ರ ಪೈಪೋಟಿ ಎದುರಾಗಿದೆಯಂತೆ.

ಈಗಾಗಲೇ ಬೆಳಗಾವಿ ಜಿಲ್ಲೆಗೆ ಒಂದು ಡಿಸಿಎಂ ಸ್ಥಾನ ನೀಡಲಾಗಿದೆ. ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಸಿಎಂ, ಡಿಸಿಎಂ ಸ್ಥಾನ ನೀಡಲಾಗಿತ್ತು. ಅದೇ ಮಾನದಂಡದಂತೆ ಹೀಗಿರುವ ಒಂದು ಡಿಸಿಎಂ ಸ್ಥಾನದ ಜೊತೆಗೆ ಮತ್ತೊಂದು ಡಿಸಿಎಂ ಸ್ಥಾನ ನೀಡಿದರೆ ತಪ್ಪೇನು ? ಎನ್ನುವುದು ರಮೇಶ್ ಜಾರಕಿಹೊಳಿಯವರ ವಾದ ಎನ್ನಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ