Breaking News

ಡಿಕೆಶಿ ಆತ್ಮಹತ್ಯೆ ಮಾಡಿಕೊಂಡರೆ ₹50 ಕೋಟಿ ಕೊಡುತ್ತೇನೆ: ಯತ್ನಾಳ

Spread the love

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ರೈತರ ವಿಚಾರವಾಗಿ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಅತ್ಮಹತ್ಯೆ ಮಾಡಿಕೊಂಡರೆ ನಾನು ₹5 ಕೋಟಿ ಪರಿಹಾರ ಕೊಡುತ್ತೇನೆ. ಅವರ ಮಾತನ್ನು ಬೆಂಬಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆತ್ಮಹತ್ಯೆ ಮಾಡಿಕೊಂಡರೆ ₹50 ಕೋಟಿ ಕೊಡುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಡಿಕೆಶಿ ಆತ್ಮಹತ್ಯೆ ಮಾಡಿಕೊಂಡರೆ ₹50 ಕೋಟಿ ಕೊಡುತ್ತೇನೆ: ಯತ್ನಾಳ

ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ರೈತರು ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಅವರು ವಿಧಾನಸೌಧದಲ್ಲೇ ಹೇಳಿದ್ದಾರೆ. ನೀವು ಆತ್ಮಹತ್ಯೆ ಮಾಡಿಕೊಂಡು ತೋರಿಸಿ ಎಂದು ನಾನು ಆಗಲೂ ಹೇಳಿದ್ದೆ. ಈಗಲೂ ಹೇಳುತ್ತೇನೆ; ನಮ್ಮ ಬಳಿ ಹಣವಿಲ್ಲದಿದ್ದರೂ ಜನರಿಂದ ಪಟ್ಟಿ ಸಂಗ್ರಹಿಸಿ ನಿಮ್ಮ ಕುಟುಂಬಕ್ಕೆ ಕೊಡುತ್ತೇವೆ’ ಎಂದರು.

‘ತಾನು ಪಂಚಮಸಾಲಿ ಎಂದು ಪುತ್ರಿ ಪ‍ರವಾಗಿ‍ ಮತ ಕೇಳುತ್ತಿರುವ ಶಿವಾನಂದ ಪಾಟೀಲ ಅವರು, ಪಂಚಮಸಾಲಿ ಹೋರಾಟ ನಡೆದಾಗ ಎಲ್ಲಿ ಹೋಗಿದ್ದರು’ ಎಂದೂ ಪ್ರಶ್ನಿಸಿದರು.

‘


Spread the love

About Laxminews 24x7

Check Also

ಸಾಗರ | ಬ್ರೇಕ್‌ ಫೇಲ್‌ ಆಗಿ ಮನೆ ಮೇಲೆ ಬಿದ್ದ ಪ್ರವಾಸಿ ಬಸ್ – 8 ಮಹಿಳೆಯರಿಗೆ ಗಾಯ

Spread the loveಶಿವಮೊಗ್ಗ: ಪ್ರವಾಸಕ್ಕೆ ಬಂದಿದ್ದ ಬಸ್ ಬ್ರೇಕ್‌ ಫೇಲ್‌ ಆಗಿ ಮನೆಯೊಂದರ ಮೇಲೆ ಬಿದ್ದ ಘಟನೆ ಸಾಗರ  ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ