Breaking News

ಲೋಕಸಭಾ ಚುನಾವಣೆಗೂ ಮುನ್ನವೇ 4650 ಕೋಟಿ ರೂ. ಸೀಜ್​! 75 ವರ್ಷದ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ

Spread the love

ವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಅಕ್ರಮಗಳ ಮೇಲೆ ಕೇಂದ್ರ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ದೇಶದಲ್ಲಿ ಮತದಾನ ಇನ್ನೂ ಆರಂಭವಾಗಿಲ್ಲ, ಅಷ್ಟರಲ್ಲೇ ಭರ್ಜರಿ ಬೇಟೆಯಾಡಿರುವ ಚುನಾವಣಾಧಿಕಾರಿಗಳು ಈವರೆಗೆ ದೇಶಾದ್ಯಂತ ನಗದು, ಮದ್ಯ, ಡ್ರಗ್ಸ್​ ಹಾಗೂ ಉಚಿತ ಉಡುಗೊರೆ ಸೇರಿದಂತೆ 4,650 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಕೇಂದ್ರ ಚುನಾವಣಾ ಆಯೋಗ ಸೋಮವಾರ (ಏಪ್ರಿಲ್​ 15) ತಿಳಿಸಿದೆ.

ಲೋಕಸಭಾ ಚುನಾವಣೆಗೂ ಮುನ್ನವೇ 4650 ಕೋಟಿ ರೂ. ಸೀಜ್​! 75 ವರ್ಷದ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ

 

ವಶಕ್ಕೆ ಪಡೆಯಲಾದ ಹಣವು 75 ವರ್ಷಗಳ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತವೆಂದು ಆಯೋಗ ಹೇಳಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 3475 ಕೋಟಿ ರೂ. ವಶಕ್ಕೆ ಪಡೆಯಲಾಗಿತ್ತು. ನಗದು, ಮದ್ಯ, ಡ್ರಗ್ಸ್​, ಬೆಲೆಬಾಳುವ ಲೋಹಗಳು ಮತ್ತು ಹಲವಾರು ಇತರ ಉಚಿತಗಳನ್ನು ಒಳಗೊಂಡಂತೆ ಮತದಾರರನ್ನು ಸೆಳೆಯುವ ವಿವಿಧ ವಸ್ತುಗಳು ಆಯೋಗವು ವಶಪಡಿಸಿಕೊಂಡ ಪಟ್ಟಿಯಲ್ಲಿದೆ. ಈ ಪಟ್ಟಿಯಲ್ಲಿ ಡ್ರಗ್ಸ್​ ಮತ್ತು ಮಾದಕವಸ್ತುಗಳು ಶೇ. 45 ರಷ್ಟಿದೆ.

 

 

ಸಮಗ್ರ ಯೋಜನೆ, ಸ್ಕೇಲ್ ಅಪ್ ಸಹಯೋಗ ಮತ್ತು ಏಜೆನ್ಸಿಗಳಿಂದ ಏಕೀಕೃತ ತಡೆ ಕ್ರಮ, ನಾಗರಿಕರ ಭಾಗವಹಿಸುವಿಕೆ ಮತ್ತು ತಂತ್ರಜ್ಞಾನದ ಸೂಕ್ತ ತೊಡಗಿಸಿಕೊಳ್ಳುವಿಕೆಯಿಂದ ಇಷ್ಟೊಂದು ಹಣವನ್ನು ಸೀಜ್​ ಮಾಡಲು ಸಾಧ್ಯವಾಯಿತು ಎಂದು ಆಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ