Breaking News

ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ.: ಶಿವಾನಂದ ಪಾಟೀಲ್ ಸವಾಲು

Spread the love

ಬಾಗಲಕೋಟೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಸಚಿವ ಶಿವಾನಂದ ಪಾಟೀಲ್ ತಿರುಗೇಟು ನೀಡಿದ್ದು, “ಸಕ್ಕರೆ ಕಾರ್ಖಾನೆಗಳಿಂದ‌ 50 ಲಕ್ಷ ಕೇಳಿದ್ದಾರೆ ಎಂಬ ಆರೋಪ ಸಾಬೀತು ಮಾಡಿದರೆ ನಾನು ರಾಜಕೀಯ ತ್ಯಜಿಸುವೆ” ಎಂದು ಸವಾಲು ಹಾಕಿದ್ದಾರೆ.

ಒಂದು ವೇಳೆ ಆರೋಪವನ್ನು ಸಾಬೀತು ಮಾಡಲು ವಿಫಲರಾದರೆ ಶಾಸಕ ಯತ್ನಾಳ್ ಅವರು ರಾಜಕೀಯ ಬಿಡಲಿ ಎಂದಿದ್ದಾರೆ.

ವಿಜಯಪುರದಿಂದ ಪಕ್ಷೇತರರಾಗಿ ಸ್ಪರ್ಧೆಗೆ ಸವಾಲೆಸೆದ ಸಚಿವ ಶಿವಾನಂದ, ಒಂದು ವೇಳೆ ಯತ್ನಾಳ್ ನನಗಿಂತ ಒಂದೇ ಮತ ಹೆಚ್ಚು ಪಡೆದರೂ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದರು.

ಸಹೋದರನ ಪುತ್ನ ಬಿಜೆಪಿಗೆ ಹೋಗಿದ್ದು ಅವರ ವೈಯಕ್ತಿಕ ನಿರ್ಧಾರ. ನನ್ನ ಪುತ್ರನೇ ಹೋದರೂ ನಾನು ಬೇಡ ಎನ್ನಲಾಗದು ಎಂದರು.

ಪಂಚಮಸಾಲಿ ಸಮಾಜದ‌ ಮೀಸಲಾತಿ ಕುರಿತ ಪ್ತಶ್ನೆಗೆ ಉತ್ತರಿಸಲು ಸಚಿವ ಶಿವಾನಂದ ಅವರು ನಿರಾಕರಿಸಿದರು.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ