Breaking News

ನಿರ್ವಹಣೆ ಕೊರತೆ: ಪಾಳುಬಿದ್ದ 150ಕ್ಕೂ ಹೆಚ್ಚು ಗರಡಿಮನೆ

Spread the love

ಹುಬ್ಬಳ್ಳಿ: ‘ಧಾರವಾಡದ ಪೈಲ್ವಾನ್ರ ಅಂದ್ರ ಹಗರಂತ ಮಾಡಿದ್ರೇನ..? ಕೊಲ್ಹಾಪುರ, ಪುಣಾ, ಬಾಂಬೆ.. ಹಿಂಗ ಎಲ್ಲಿಗೇ ಕುಸ್ತಿ ಆಡಾಕ ಹೋದ್ರ ಕಣದಾಗ ನಂಬರ್ ಹಚ್ಚಲಾರದ ಬರ್ತಿರಲಿಲ್ಲ. ಕುಸ್ತಿಗಿ ರಾಜ್ಯದಾಗ ಧಾರವಾಡ ಜಿಲ್ಲಾ ಹೆಸರಾಗಿತ್ತ.. ಆದ್ರ ಈಗ ಹಂಗ ಉಳಿದಿಲ್ಲರೀ’…!

ಹುಬ್ಬಳ್ಳಿ | ನಿರ್ವಹಣೆ ಕೊರತೆ: ಪಾಳುಬಿದ್ದ 150ಕ್ಕೂ ಹೆಚ್ಚು ಗರಡಿಮನೆ

ಹೀಗೆ ನೋವಿನಿಂದ ಹೇಳುತ್ತಾರೆ ಕುಸ್ತಿ ಪೈಲ್ವಾನರು. ನಿರ್ವಹಣೆ ಕೊರತೆಯಿಂದ ಪಾಳು ಬಿದ್ದು ಇತಿಹಾಸದ ಪುಟ ಸೇರುತ್ತಿರುವ ಗರಡಿ ಮನೆಗಳೇ ಇದಕ್ಕೆ ಕಾರಣ ಎಂಬುದು ಅವರ ಬೇಸರ.

ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಮನೆಗೊಬ್ಬರು ಪೈಲ್ವಾನರು, ಓಣಿಗೊಂದು ಗರಡಿ ಮನೆ ಇತ್ತು. ಆದರೆ ಆಧುನಿಕತೆ ಪ್ರಭಾವದಿಂದ ಈ ಸಂಖ್ಯೆ ಕ್ರಮೇಣ ಕ್ಷೀಣಿಸಿದೆ. ಇದೀಗ ತಾಲ್ಲೂಕಿಗೆ ಒಂದಿಬ್ಬರು ಪೈಲ್ವಾನರ ಹೆಸರು ಕೇಳಿಬಂದರೆ, ಅಲ್ಲೊಂದು, ಇಲ್ಲೊಂದು ಗರಡಿಮನೆಗಳು ಮಾತ್ರ ಬಳಕೆಗೆ ಯೋಗ್ಯವಾಗಿವೆ.

ಗರಡಿ ಮನೆಗಳಿಗೇ ಹೆಸರುವಾಸಿ ಯಾಗಿದ್ದ ಹುಬ್ಬಳ್ಳಿಯ ಉಣಕಲ್ ಗ್ರಾಮದಲ್ಲಿ ಈ ಹಿಂದೆ 13 ಗರಡಿ ಮನೆಗಳಿದ್ದವು. ಆದರೆ, ಈ ಪೈಕಿ ಒಂದೇ ಉಳಿದಿದೆ. ಹೀಗೆ ಜಿಲ್ಲೆಯಲ್ಲಿನ 150ಕ್ಕೂ ಹೆಚ್ಚು ಗರಡಿ ಮನೆಗಳಲ್ಲಿ ಸದ್ಯ ತಾಲೀಮು ಸದ್ದು ನಿಂತುಹೋಗಿದೆ. 50 ರಿಂದ 60 ಗರಡಿಮನೆಗಳು ಮಾತ್ರ ಬಳಕೆಯಲ್ಲಿವೆ.


Spread the love

About Laxminews 24x7

Check Also

ಹುಬ್ಬಳ್ಳಿ ಲವ್ ಜಿಹಾದ್ – ಅತ್ಯಾಚಾರ ಬಳಿಕ ಬೆದರಿಕೆಯೊಡ್ಡಿ 70 ಸಾವಿರಕ್ಕೂ ಅಧಿಕ ಹಣ ಪೀಕಿದ್ದ ಸಮೀರ್

Spread the loveಹುಬ್ಬಳ್ಳಿ: ಲವ್ ಜಿಹಾದ್  ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ಟ್ರೈನರ್‌ ಸಮೀರ್ ಅತ್ಯಾಚಾರದ ಬಳಿಕ ಬೆದರಿಕೆಯೊಡ್ಡಿ 70 ಸಾವಿರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ