Breaking News

ಕಲ್ಲೋಳಿ ಮಹಾಲಕ್ಷ್ಮಿ ಸೊಸೈಟಿಗೆ ₹2.51 ಕೋಟಿ ಲಾಭ: ಈರಣ್ಣ ಕಡಾಡಿ

Spread the love

ಮೂಡಲಗಿ: ‘ಕಲ್ಲೋಳಿಯ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸೊಸೈಟಿಯು 2023-24ನೇ ಆರ್ಥಿಕ ವರ್ಷದ ಕೊನೆಯಲ್ಲಿ ₹2.51 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.

ಸೊಸೈಟಿಯ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದ್ಯ ಸೊಸೈಟಿಯಲ್ಲಿ 12,612 ಸದಸ್ಯರಿದ್ದು, ₹20.12 ಲಕ್ಷ ಶೇರು ಬಂಡವಾಳ, ₹6.96 ಕೋಟಿ ಕಾಯ್ದಿಟ್ಟ ನಿಧಿ, ₹71.10 ಕೋಟಿ ಠೇವು ಸಂಗ್ರಹ ಹಾಗೂ ₹66.71 ಕೋಟಿ ಸಾಲವನ್ನು ವಿತರಿಸಲಾಗಿದೆ’ ಎಂದು ತಿಳಿಸಿದರು.

 

‘ಸೊಸೈಟಿಯು ₹8.89 ಕೋಟಿ ಗುಂತಾವಣಿಗಳನ್ನು ಹೊಂದಿದ್ದು, ₹78.10 ಕೊಟಿ ದುಡಿಯುವ ಬಂಡವಾಳ, ₹318 ಕೋಟಿ ವಹಿವಾಟು ಮಾಡಿದೆ. ಕಲ್ಲೋಳಿಯಲ್ಲಿ ನಿರ್ಮಿಸುತ್ತಿರುವ ಸೊಸೈಟಿಯ ಪ್ರಧಾನ ಕಚೇರಿಯ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಗ್ರಾಹಕರಿಗೆ ಹೊಸ ಕಟ್ಟಡದಲ್ಲಿ ಇನ್ನು ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು’ ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ