Breaking News

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

Spread the love

ದಾವಣಗೆರೆ : 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಗಳೂರು ರಾಗಿ ಖರೀದಿ ಕೇಂದ್ರಕ್ಕೆ ರಾಗಿಯನ್ನು ನೀಡಿರುವ ಹೊರ ತಾಲ್ಲೂಕು, ಹೊರ ಜಿಲ್ಲೆಯಲ್ಲಿನ ಪಟ್ಟಿಯಲ್ಲಿರುವ ರೈತರು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ರೈತರಿಂದ ಅರ್ಹ ದಾಖಲೆಗಳನ್ನು ಸಂಗ್ರಹಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ರೈತರು ಜಗಳೂರು ತಾಲ್ಲೂಕು ಕಚೇರಿಯ ಆಹಾರ ಶಾಖೆಯನ್ನು ಸಂಪರ್ಕಿಸಿ 7 ದಿನಗಳ ಒಳಗಾಗಿ ಸಂಬಂಧಪಟ್ಟ ದಾಖಲೆಗಳ ಜೆರಾಕ್ಸ್ ಪ್ರತಿ, 2022-23 ನೇ ಸಾಲಿನ ಮುಂಗಾರಿನ ರಾಗಿ ಬೆಳೆದ ಪಹಣಿ ಪ್ರತಿ, ಫೂಟ್ಸ್ ಐಡಿ, ಗ್ರೆನ್ ವೋಚರ್, ಆಧಾರ್ ಕಾರ್ಡ್, ವೇ-ಬ್ರಿಡ್ಜ್ ರಶೀದಿ (ಇದ್ದಲ್ಲಿ) ಪಹಣಿಯಲ್ಲಿರುವ ವಾರಸುದಾರ ಮೃತಪಟ್ಟಿದ್ದಲ್ಲಿ ವಂಶವೃಕ್ಷ ದಾಖಲೆ,

ಪಹಣಿ ಜಂಟಿ ಖಾತೆಯಲ್ಲಿದ್ದರೆ, 20/-ಸ್ಟಾಂಪ್ ಪೇಪರ್ ಮೇಲೆ ನೋಟರಿಯಿಂದ ದೃಢೀಕೃತ ಒಪ್ಪಿಗೆ ಪ್ರಮಾಣ ಪತ್ರ ತಾಲ್ಲೂಕು ಕಚೇರಿ ಜಗಳೂರಿನ ಆಹಾರ ಶಾಖೆಗೆ ತಪ್ಪದೇ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ