Breaking News

ಬಿಸಿಲ ತಾಪಕ್ಕೆ ಹೈರಾಣಾದ ಜನ

Spread the love

ಸೊರಬ: ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಜನರು ಬಿಸಿಲಿಗೆ ಹೈರಾಣಾಗಿದ್ದಾರೆ. ಯುಗಾದಿಗೂ ಮುನ್ನವೇ ಸೂರ್ಯನ ಪ್ರಖರತೆ ಹೆಚ್ಚುತ್ತಿದೆ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ತಾಲ್ಲೂಕಿನ ‌ಬಹುತೇಕ ಕೆರೆಕಟ್ಟೆಗಳ ಒಡಲು ಬರಿದಾಗಿವೆ.ಕೆಲವೊಂದು ಕೆರೆಗಳಲ್ಲಿ ‌ನೀರು ಬತ್ತುವ ಹಂತ ತಲುಪಿವೆ. ರೈತರು ದನ‌ ಹಾಗೂ ಕುರಿಗಳಿಗೆ ನೀರು ಕುಡಿಸಲು ಕೆರೆಗೆ ಹೊಡೆದುಕೊಂಡು ಹೋದರೆ ಕೆಸರುಯುಕ್ತ ನೀರನ್ನು ಕುಡಿಯಲು ದನಕರುಗಳು ಹಿಂದೇಟು ಹಾಕುತ್ತಿವೆ.

ರೈತರ ಹೊಲ, ಗದ್ದೆಗಳಲ್ಲಿನ ಕೊಳವೆಬಾವಿಗಳಲ್ಲಿ ಗಣನೀಯವಾಗಿ ಅಂತರ್ಜಲ ಕುಸಿದ ಪರಿಣಾಮ ಅಡಿಕೆ, ಬಾಳೆ ತೋಟ ಒಣಗುತ್ತಿವೆ.‌ ಮೆಕ್ಕೆಜೋಳಕ್ಕೆ‌ ಸರಿಯಾಗಿ ನೀರು‌ ಸಿಗದ‌ ಕಾರಣ ಬೆಳೆದು ನಿಂತ ಬೆಳೆ ಒಣಗುತ್ತಿದೆ. ಫಸಲು‌ ಬರುವ‌ ಬೆಳೆಯನ್ನು ಕಟಾವು‌ ಮಾಡಿ‌ ಜಾನುವಾರುಗಳಿಗೆ ಮೇವು‌ ನೀಡಲಾಗುತ್ತದೆ. ಬೆಳೆಗೆ ಲಕ್ಷಾಂತರ ‌ರೂಪಾಯಿ‌ ಖರ್ಚು ಮಾಡಿ ನೀರಿನ‌ ಕೊರತೆಯಿಂದ ನಷ್ಟ ಅನುಭವಿಸುವಂತಾಗಿದೆ‌ ಎಂದು ಕೊಡಕಣಿ ಗ್ರಾಮದ ರೈತ ಗೋಪಾಲ ಅವಲತ್ತುಕೊಂಡರು.

ತಾಲ್ಲೂಕಿನಲ್ಲಿ ಮಾರ್ಚ್‌ ಮೊದಲ ವಾರದಲ್ಲಿ 25, 26 ಡಿಗ್ರಿ ಉಷ್ಣಾಂಶವಿತ್ತು. ಆದರೆ, ಬುಧವಾರ 30 ಡಿಗ್ರಿ ತಾಪಮಾನ ದಾಖಲಾಗಿದೆ. ನಿತ್ಯ ಬೆಳಿಗ್ಗೆ 9ರ ವೇಳೆಗೆ ಬಿಸಿಲು ಹೆಚ್ಚಾಗುತ್ತದೆ. ಮಧ್ಯಾಹ್ನ 12 ಗಂಟೆ ದಾಟುತ್ತಿದ್ದಂತೆಯೇ ಮನೆಯಿಂದ ಹೊರಬರಲು ಹಿಂದೇಟು ಹಾಕುವ ಸ್ಥಿತಿ ಎದುರಾಗಿದೆ. ಸಂಜೆ 4 ಗಂಟೆಯವರೆಗೂ ಬಿಸಿಲಿನ ಝಳ ಕಡಿಮೆಯಾಗುತ್ತಿಲ್ಲ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ