Breaking News

ಬಿಜೆಪಿ ಐದು ಅಭ್ಯರ್ಥಿಗಳ ಹೆಸರು ಇಂದೇ ಫೈನಲ್‌ – ಪಟ್ಟಿಯಲ್ಲಿರೋ ಹೆಸರು ಹೀಗಿದೆ!

Spread the love

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ‌ (Lokasabha Election 2024) ಬಿಜೆಪಿಯು (BJP) ಅಭ್ಯರ್ಥಿಗಳ ಹೆಸರನ್ನು ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳಿಗೆ ಅಂತಿಮ ಪಟ್ಟಿ ಸಿದ್ದವಾಗಿದೆ. ಉತ್ತರ ಕನ್ನಡ, ಬೆಳಗಾವಿ, ರಾಯಚೂರು, ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದ್ದು, ದೆಹಲಿ ವರಿಷ್ಠರ ಭೇಟಿಗೆ ಮಾಜಿ ಸಿಎಂ ಯಡಿಯೂರಪ್ಪ (B S Yediyurappa) ದೌಡಾಯಿಸಿದ್ದಾರೆ.

ಉತ್ತರ ಕನ್ನಡ – ಅನಂತ ಕುಮಾರ್‌, ಬೆಳಗಾವಿ – ಜಗದೀಶ್‌ ಶೆಟ್ಟರ್‌, ರಾಯಚೂರು – ಬಿ.ವಿ.ನಾಯಕ್‌, ಚಿತ್ರದುರ್ಗ – ಜೆ. ಜನಾರ್ಧನ ಸ್ವಾಮಿ / ಆನೇಕಲ್‌ ನಾರಾಯಣ ಸ್ವಾಮಿ, ಚಿಕ್ಕಬಳ್ಳಾಪುರ – ಡಾ. ಕೆ .ಸುಧಾಕರ್‌ / ಅಲೋಕ್‌ ವಿಶ್ವನಾಥ್‌ ಹೆಸರು ಪಟ್ಟಿಯಲ್ಲಿದೆ .

ದೆಹಲಿಗೆ ತೆರಳುವ ಮುನ್ನ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ಅಗರ್‌ವಾಲ್‌, ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಜಯೇಂದ್ರ ಹೈವೋಲ್ಟೇಜ್‌ ಮೀಟಿಂಗ್‌ ನಡೆಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ