Breaking News

ಶಾಸಕ ಗೋಪಾಲಯ್ಯಗೆ ಬೆದರಿಕೆ ಕೇಸ್: ಪದ್ಮರಾಜ್​ಗೆ ಜಾಮೀನು, ಅಶೋಕ್ ವಿರುದ್ಧ ಕೇಳಿಬಂತು ಗಂಭೀರ ಆರೋಪ

Spread the love

ಬೆಂಗಳೂರು, ಮಾಜಿ ಕಾರ್ಪೊರೇಟರ್​​​​​​​​​​​​​​ ಪದ್ಮರಾಜ್​ರಿಂದ ಶಾಸಕ ಕೆ.ಗೋಪಾಲಯ್ಯ(K Gopalaiah)ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 39ನೇ ಎಸಿಎಂಎಂ ಕೋರ್ಟ್​ನಿಂದ ಪದ್ಮರಾಜ್​ಗೆ ಜಾಮೀನು ಮಂಜೂರು ಮಾಡಲಾಗಿದೆ. ಈ ಕುರಿತಾಗಿ ಮಾತನಾಡಿರುವ ಪದ್ಮರಾಜ್​, 2010 ರಲ್ಲಿ ಬಿಜೆಪಿ ನಾಯಕರ ಆರ್​​. ಅಶೋಕ್, ನನ್ನ ಮೇಯರ್ ಮಾಡುತ್ತೇನೆ ಅಂತ ಒಂದು ಕೋಟಿ ರೂ. ಹಣ ತೆಗೆದುಕೊಂಡರು. ಇವತ್ತಿಗೂ ಮೇಯರ್ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆ ಹಣ ವಾಪಸ್ ತೆಗೆದುಕೊಂಡೆ ಎಂದಿದ್ದಾರೆ. ಕೆ.ಗೋಪಾಲಯ್ಯಗೆ ಜೀವ ಬೆದರಿಕೆ ಸತ್ಯಕ್ಕೆ ದೂರುವಾದ ಮಾತು. ಕೊಲೆ ಬೆದರಿಕೆ ಹಾಕುವ ವ್ಯಕ್ತಿ ನಾನು ಅಲ್ಲ. ಮಂಜುನಾಥ್ ಮೇಲೆ ಆಣೆ. ನಾನು ಬೆದರಿಕೆ ಹಾಕಿಲ್ಲ. ದೇವರು ಅವರಿಗೆ ಒಳ್ಳೆದು ಮಾಡಲಿ.

ಶಾಸಕ ಗೋಪಾಲಯ್ಯಗೆ ಬೆದರಿಕೆ ಕೇಸ್: ಪದ್ಮರಾಜ್​ಗೆ ಜಾಮೀನು, ಅಶೋಕ್ ವಿರುದ್ಧ ಕೇಳಿಬಂತು ಗಂಭೀರ ಆರೋಪ

 

ಗುತ್ತಿಗೆ ಕೊಡಿಸುವ ವಿಚಾರಕ್ಕೆ 15 ಲಕ್ಷ ರೂ. ಹಣ ಕೊಟ್ಟಿದ್ದೆ. ಕೆಲಸ ಕೊಡಿಸಲಿಲ್ಲ ಅದಕ್ಕೆ ಕರೆ ಮಾಡಿದೆ ಆಗ ಒಂದಷ್ಟು ಮಾತುಗಳಾದವು ಎಂದು ಹೇಳಿದ್ದಾರೆ.

 

ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಂದ ಪದ್ಮರಾಜು ವಿಚಾರಣೆ

 

ಬಿಜೆಪಿ ಶಾಸಕ ಕೆ ಗೋಪಾಲಯ್ಯಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಪದ್ಮರಾಜು ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಮಂಗಳವಾರ ರಾತ್ರಿ 11 ಗಂಟೆಗೆ ಗೋಪಾಲಯ್ಯಗೆ ಕರೆ ಮಾಡಿದ್ದ ಪದ್ಮರಾಜು, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾಗಿ ಪೊಲೀಸ್​ ಠಾಣೆಗೆ ಕೆ. ಗೋಪಾಲಯ್ಯ ದೂರು ನೀಡಿದ್ದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ