Breaking News

ಅಂಜನಾದ್ರಿಗೆ ಆಗಮಿಸಿದ್ದ ಯುಪಿ ಭಕ್ತರು ಮತ್ತು ಸ್ಥಳೀಯರ ನಡುವೆ ಗಲಾಟೆ,

Spread the love

ಕೊಪ್ಪಳ, ಜ.2: ಆಂಜನೇಯ ದರ್ಶನಕ್ಕಾಗಿ ಅಂಜನಾದ್ರಿಗೆ ಬಂದು ವಾಪಸ್ ಆಗುತ್ತಿದ್ದ ಉತ್ತರ ಪ್ರದೇಶದ ಭಕ್ತರು ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದ ಘಟನೆಕೊಪ್ಪಳ (Koppal)ಜಿಲ್ಲೆಯ ಗಂಗಾವತಿ ತಾಲೂಕಿನ ಕೊರಮ್ಮನ ಕ್ಯಾಂಪ್ ಬಳಿ ನಡೆದಿದೆ. ಗಲಾಟೆ ವೇಳೆ ಬಸ್​ಗಳಿಗೆ ಕಲ್ಲು ತೂರಲಾಗಿದ್ದು, ಇಬ್ಬರು ಭಕ್ತರಿಗೆ ಗಾಯಗಳಾಗಿವೆ.

ಉತ್ತರ ಪ್ರದೇಶದದಿಂದ ನಾಲ್ಕು ಬಸ್​ಗಳಲ್ಲಿ ಹನುಮಂತನ ಭಕ್ತರು ಅಂಜನಾದ್ರಿಗೆ ಆಗಮಿಸಿದ್ದರು. ವಾಪಸ್ ಆಗುತ್ತಿದ್ದಾಗ ಬಸ್​ಗಳನ್ನು ತಡೆದ ಸ್ಥಳೀಯರು ಜಗಳ ಎತ್ತಿದ್ದಾರೆ. ವಿದ್ಯುತ್ ವೈಯರ್ ತುಂಡಾಗುವಂತೆ ಬಸ್ ಚಾಲನೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಗಲಾಟೆ, ಮಾತಿನ ಚಕಮಕಿ ನಡೆದಿದ್ದು, ಉತ್ತರ ಪ್ರದೇಶದ ಬಸ್ ಮೇಲೆ ಸ್ಥಳೀಯರು ಕಲ್ಲೆಸೆದಿದ್ದಾರೆ.

 

ಘಟನೆಯಲ್ಲಿ ಉತ್ತರಪ್ರದೇಶ ಮೂಲದ ರಾಮಕುಮಾರ್ ಹಾಗೂ ಮೋನು ಎಂಬವರ ತಲೆಗೆ ಗಾಯಗಳಾಗಿದ್ದು, ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಖಂಡಿಸಿ ಗಂಗಾವತಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಉತ್ತರ ಪ್ರದೇಶದ ನೂರಾರು ಭಕ್ತರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ