Breaking News
Home / ರಾಜಕೀಯ / 10 ವರ್ಷಗಳಲ್ಲೇ 2023ರಲ್ಲಿ ಅತಿಹೆಚ್ಚು ಮಾರಣಾಂತಿಕ ಅಪಘಾತ

10 ವರ್ಷಗಳಲ್ಲೇ 2023ರಲ್ಲಿ ಅತಿಹೆಚ್ಚು ಮಾರಣಾಂತಿಕ ಅಪಘಾತ

Spread the love

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ ವರ್ಷ ಅಂದರೆ 2023ರಲ್ಲಿ 870 ಮಾರಣಾಂತಿಕಅಪಘಾತಗಳು (Accident) ಸಂಭವಿಸಿವೆ. ಇದು ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಗರಿಷ್ಠ ಅಪಘಾತಗಳ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆ ಮಂಗಳವಾರ ಹಂಚಿಕೊಂಡ ಅಂಕಿಅಂಶ ತಿಳಿಸಿದೆ. 2013 ರಲ್ಲಿ 733 ಅಪಘಾತಗಳು ಸಂಭವಿಸಿದ್ದವು.

2023ರಲ್ಲಿ 4,959 ಅಪಘಾತಗಳು ಸಂಭವಿಸಿದ್ದು, 899 ಜನರು ಮೃತಪಟ್ಟಿದ್ದಾರೆ. 4,959 ಅಪಘಾತಗಳಲ್ಲಿ, 4,089 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 4,176 ಜನರು ಗಾಯಗೊಂಡಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸರ ಪ್ರಕಾರ, ಅಪಘಾತಕ್ಕೀಡಾದ ಶೇಕಡಾ 70 ರಷ್ಟು ವಾಹನಗಳು ದ್ವಿಚಕ್ರ ವಾಹನಗಳಾಗಿವೆ. ಕಳೆದ 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಶೇ 58 ರಷ್ಟು ಹೆಚ್ಚಳವಾಗಿದೆ. 2013ರಲ್ಲಿ 49 ಲಕ್ಷ ಇದ್ದ ವಾಹನಗಳ ಸಂಖ್ಯೆ, 2023ರಲ್ಲಿ 1.2 ಕೋಟಿಗೆ ಏರಿಕೆಯಾಗಿದೆ.

ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಕೂಡ ಏರಿಕೆಯಾಗಿದೆ. 2018 ರಲ್ಲಿ 663 ಜನ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದರು. 2019 ರಲ್ಲಿ 746, 2020 ರಲ್ಲಿ 621, 2021 ರಲ್ಲಿ 621, 2022 ರಲ್ಲಿ 752 ಮತ್ತು 2023 ರಲ್ಲಿ 870 ಜನ ಮೃತಪಟ್ಟಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ