Home / ರಾಜಕೀಯ / ಐಶ್ವರ್ಯಾ ರೈ ಇಷ್ಟವಿರಲಿಲ್ಲ

ಐಶ್ವರ್ಯಾ ರೈ ಇಷ್ಟವಿರಲಿಲ್ಲ

Spread the love

ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಅನೇಕ ವಿಷಯಗಳು ಬೆಳಕಿಗೆ ಬರುತ್ತಿವೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವೆ ಭಿನ್ನಾಭಿಪ್ರಾಯವಿದೆ, ಇಬ್ಬರೂ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತಿವೆ.

 

ಇದರ ಜೊತೆಗೆ ಕೆಲ ದಿನಗಳಿಂದಬಚ್ಚನ್ಕುಟುಂಬ ಸೊಸೆ ಐಶ್ವರ್ಯಾ ರೈ ಅವರನ್ನು ಕಡೆಗಣಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕೆಲ ಮೂಲಗಳ ಪ್ರಕಾರ, ಜಯಾ ಬಚ್ಚನ್’ಗೆ ಐಶ್ವರ್ಯಾರನ್ನು ಸೊಸೆಯನ್ನಾಗಿಸಿ ಮನೆ ತುಂಬಿಸಿಕೊಳ್ಳಲು ಇಷ್ಟವಿರಲಿಲ್ಲವಂತೆ, ಬದಲಾಗಿ ಕಪೂರ್ ಕುಟುಂಬದ ಕುಡಿ ಕರೀಷ್ಮಾ ಕಪೂರ್ ಅವರನ್ನು ತಮ್ಮ ಏಕೈಕ ಪುತ್ರ ಅಭಿಷೇಕ್’ಗೆ ಮದುವೆ ಮಾಡಿಸಬೇಕೆಂದುಕೊಂಡಿದ್ದರು ಎನ್ನಲಾಗುತ್ತಿದೆ.

ಇವೆಲ್ಲದರ ಹೊರತಾಗಿ ಈ ಹಿಂದೆ ರೆಡಿಫ್‌’ಗೆ ನೀಡಿದ ಸಂದರ್ಶನದಲ್ಲಿ, ಜಯಾ ಬಚ್ಚನ್ ಐಶ್ವರ್ಯಾ ರೈ ಬಗ್ಗೆ ಹೇಳಿಕೆಯೊಂದನ್ನು “ನನಗೆ ಐಶ್ವರ್ಯಾ ಬಗ್ಗೆ ಏನಾದರೂ ಅಸಮಾಧಾನ ಅನಿಸಿದರೆ, ನಾನು ಅದನ್ನು ಮುಖಕ್ಕೆ ಹೊಡೆದಂತೆ ಹೇಳುತ್ತೇನೆ. ಬೆನ್ನ ಹಿಂದೆ ಯಾವುದೇ ರಾಜಕೀಯ ಮಾಡುವುದಿಲ್ಲ. ಅವಳು ಕೂಡ ಅಷ್ಟೇ, ತನಗೆ ಬೇಸರ ಅನಿಸಿದರೆ ಹೇಳಿಕೊಳ್ಳುತ್ತಾಳೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

!

ಕೆಲ ವರದಿಗಳ ಪ್ರಕಾರ, ಒಮ್ಮೆ ತಮ್ಮ ಸೊಸೆ ಐಶ್ವರ್ಯಾ ರೈ ಮೇಲೆ ಪ್ರೀತಿಯ ಮಳೆಗರೆಯುತ್ತಿದ್ದ ಬಚ್ಚನ್ ಕುಟುಂಬ, ಇದ್ದಕ್ಕಿದ್ದಂತೆ ಅವರನ್ನು ದೂರವಿಡಲು ಶುರು ಮಾಡಿದೆ. ಜಯಾ ಬಚ್ಚನ್ ಸೊಸೆ ಐಶ್ವರ್ಯಾ ರೈ ಅವರನ್ನು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಇದೇ ವೇಳೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ