Breaking News
Home / ಜಿಲ್ಲೆ / ಬೆಳಗಾವಿ / ಕರ್ನಾಟಕ ವಿಧಾನಸಭೆಯ ಎಸ್ಟಿಮೇಟ್ ಕಮಿಟಿ (ಅಂದಾಜುಗಳ ಸಮಿತಿ) ಅಧ್ಯಕ್ಷರನ್ನಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರನ್ನು ನೇಮಕಮಾಡಲಾಗಿದೆ.

ಕರ್ನಾಟಕ ವಿಧಾನಸಭೆಯ ಎಸ್ಟಿಮೇಟ್ ಕಮಿಟಿ (ಅಂದಾಜುಗಳ ಸಮಿತಿ) ಅಧ್ಯಕ್ಷರನ್ನಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರನ್ನು ನೇಮಕಮಾಡಲಾಗಿದೆ.

Spread the love

ಬೆಂಗಳೂರು  – ಕರ್ನಾಟಕ ವಿಧಾನಸಭೆಯ ಎಸ್ಟಿಮೇಟ್ ಕಮಿಟಿ (ಅಂದಾಜುಗಳ ಸಮಿತಿ) ಅಧ್ಯಕ್ಷರನ್ನಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರನ್ನು ನೇಮಕಮಾಡಲಾಗಿದೆ.

ಒಟ್ಟೂ 17 ಜನರ ಸಮಿತಿಯನ್ನು ನೇಮಕ ಮಾಡಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದಾರೆ.

ಎಸ್.ಎ.ರವೀಂದ್ರನಾಥ, ದುರ್ಯೋಧನ ಐಹೊಳೆ, ವೀರಣ್ಣ ಚರಂತಿಮಠ, ಶಿವರಾಜ ಪಾಟೀಲ, ಹಾಲಪ್ಪ ಆಚಾರ, ಅಮೃತ ದೇಸಾಯಿ, ಮಹಾಂತೇಶ ದೊಡ್ಡಗೌಡರ್, ಸುನೀಲ ನಾಯ್ಕ, ಅಮರೇಗೌಡ ಬಯ್ಯಾಪುರ, ಶರಣ ಬಸಪ್ಪ ದರ್ಶನಾಪುರ, ಮಹಾಂತೇಶ ಕೌಜಲಗಿ, ಸತೀಶ್ ಜಾರಕಿಹೊಳಿ, ಯಶವಂತರಾಯಗೌಡ ಪಾಟೀಲ, ಡಿ.ಸಿ.ತಮ್ಮಣ್ಣ, ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ ಸಮಿತಿಯ ಸದಸ್ಯರಾಗಿದ್ದು, ಅಭಯ ಪಾಟೀಲ ಅಧ್ಯಕ್ಷರಾಗಿರುತ್ತಾರೆ.

ಈ ಹಿಂದೆ ಎಸ್ಟಿಮೇಟ್ ಸಮಿತಿ ಸದಸ್ಯರಾಗಿ ಬೆಳಗಾವಿ ಜಿಲ್ಲೆಯ ಹಲವಾರು ಅಕ್ರಮಗಳನ್ನು ಅಭಯ ಪಾಟೀಲ ಬಯಲಿಗೆಳೆದಿದ್ದರು. ಅನೇಕ ಎಂಜಿನಿಯರ್ ಗಳು ಅಮಾನತುಗೊಂಡಿದ್ದರು.


Spread the love

About Laxminews 24x7

Check Also

ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು: ಸಿಎಂ, ಡಿಸಿಎಂ, ರಾಹುಲ್ ಗಾಂಧಿಗೆ ಕೋರ್ಟ್ ಸಮನ್ಸ್‌

Spread the loveಬೆಂಗಳೂರು, (ಮಾರ್ಚ್ 28): ಕಳೆದ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆ ಚುನಾವಣೆ (Karnataka Assembly Elections 2023) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ