Breaking News

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಡಿ.10 ರಿಂದ 24ರ ವರೆಗೆ ಚಂಪಾಷಷ್ಠಿ ಮಹೋತ್ಸವ

Spread the love

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಈ ವರ್ಷದ ಚಂಪಾಷಷ್ಠಿ ಮಹೋತ್ಸವವು ಅದ್ಧೂರಿಯಾಗಿ ನಡೆಯಲಿದೆ.

 

ಇದೇ ಶೋಭಕೃತ್ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ ಆದಿತ್ಯವಾರ 10-12-2023 ರಿಂದ ಲಾಗ್ಯಾತು ಮಾರ್ಗಶಿರ ಶುದ್ಧ ದ್ವಾದಶಿ ಆದಿತ್ಯವಾರ 24-12-2023ರ ವರೆಗೆ ಈ ಕೆಳಗಿನ ವಿವರದಂತೆ ವಾರ್ಷಿಕ ಜಾತ್ರಾ ಉತ್ಸವಾದಿಗಳು ಜರುಗಲಿವೆ. ಭಗವತ್ಸಂಕಲ್ಪ ಪ್ರಕಾರ ನಡೆಯುವ ಈ ಮಹೋತ್ಸವಗಳಿಗೆ ಭಕ್ತರು ಇಷ್ಟ ಮಿತ್ರರೊಡಗೂಡಿ ಆಗಮಿಸಿ ದೇವರ ಮೂಲ ಮೃತ್ತಿಕಾ ಗಂಧ-ಪ್ರಸಾದವನ್ನು ಸ್ವೀಕರಿಸಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ನೀಡಿದೆ.

 ಚಂಪಾಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಕಾರ್ಯಗಳ ವಿವರಗಳು ಈ ಕೆಳಗಿನಂತಿವೆ:

10-12-2023ರ ಭಾನುವಾರ: ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ.

11-12-2023ರ ಸೋಮವಾರ: ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ.

12-12-2023ರ ಮಂಗಳವಾರ: ಲಕ್ಷದೀಪೋತ್ಸವ.

13-12-2023 ಕ್ಕೆ ಶೇಷವಾಹನೋತ್ಸವ.

14-12-2023 ರಂದು ಅಶ್ವವಾಹನೋತ್ಸವ.

15-12-2023 ರಂದು ಮಯೂರ ವಾಹನೋತ್ಸವ.

16-12-2023 ರಂದು ರಾತ್ರಿ ಹೂವಿನ ತೇರಿನ ಉತ್ಸವ.

17-12-2023ರ ಆದಿತ್ಯವಾರ ರಾತ್ರಿ ದೇವರ ಪಂಚಮಿ ರಥೋತ್ಸವ, ತೈಲಾಭ್ಯಂಜನ.

18-12-2023 ರಂದು ಪ್ರಾತಃ ಕಾಲ ಪ್ರಸಿದ್ಧ ಚಂಪಾಷಷ್ಠಿ ಮಹಾರಥೋತ್ಸವ.

19-12-2023 ಮಂಗಳವಾರದಂದು ಶ್ರೀ ದೇವರ ಅವಕೃತೋತ್ಸವ, ನೌಕಾವಿಹಾರ.

24-12-2023 ಆದಿತ್ಯವಾರದಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ಕಾರ್ಯಗಳು ನಡೆಯಲಿವೆ.

09-12-2023ರ ಶನಿವಾರ “ಮೂಲಮೃತ್ತಿಕಾ” ಪ್ರಸಾದ ವಿತರಣೆ ಮತ್ತು ಕಿರುಷಷ್ಠಿ ಮಹೋತ್ಸವವು 16-01-2024 ರಂದು ಜರುಗಲಿದೆ.

ಇನ್ನು, ದಿನಾಂಕ 10-12-2023 ರಿಂದ 12-12-2023ರ ವರೆಗೆ ಭಕ್ತರು ಸಲ್ಲಿಸುವ ಹಸಿರು ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ ಎಂದು ದೇವಸ್ಥಾನದಿಂದ ಹೊರಡಿಸಲಾದ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.

 ಚಂಪಾಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಸೇವೆಗಳ ವಿವರ:

1. ಮಹಾರಥೋತ್ಸವ-25,000-00
2. ಚಿಕ್ಕ ರಥೋತ್ಸವ-8,000-00
3. ಚಂದ್ರಮಂಡಲ ಉತ್ಸವ-6,000-00
4. ಹೂವಿನ ತೇರಿನ ಉತ್ಸವ-5,000-00
5. ಬಂಡಿ ಉತ್ಸವ-3,000-00
6. ಮಹಾಭಿಷೇಕ-6,000-00
7. ದೀಪಾರಾಧನೆ, ಪಾಲಕಿ ಉತ್ಸವ-2,500-00
8. ಮಹಾಪೂಜೆ, ಪಾಲಕಿ ಉತ್ಸವ-1,500-00
9. ಸಪರಿವಾರ ಸೇವಾ-2,000-00
10. ನಾಗಪ್ರತಿಷ್ಠೆ-400-00
11. ಆಶ್ಲೇಷ ಬಲಿ-400-00
12. ಮಹಾಪೂಜೆ (ಇಡೀ ದಿನದ್ದು)- 400-00
13. ಮಹಾಪೂಜೆ (ಮಧ್ಯಾಹ್ನ)-250-00
14. ಪಂಚಾಮೃತ ಅಭಿಷೇಕ-75-00
15. ರುದ್ರಾಭಿಷೇಕ-75-00
16. ಕ್ಷೀರಾಭಿಷೇಕ-50-00
17. ಶೇಷ ಸೇವೆ-100-00
18. ಹರಿವಾಣ ನೈವೇದ್ಯ-100-00
19. ಕಾರ್ತಿಕ ಪೂಜೆ-50-00
20. ಪಂಚಕಜ್ಜಾಯ-20-00
21. ಲಾಡು ಪ್ರಸಾದ-20-00
22. ತೀರ್ಥ ಬಾಟ್ಲಿ-10-00

ಮನಿಯಾರ್ಡರ್, ಡಿ. ಡಿ., ಚೆಕ್ಕು ಮೂಲಕ ಕಾಣಿಕೆ ರೂ. 50.00 ಅಥವಾ ಅದಕ್ಕಿಂತ ಅಧಿಕ ಹಣ ಕಳುಹಿಸುವ ಭಕ್ತಾದಿಗಳಿಗೆ ಅಂಚೆ ಮೂಲಕ ಪ್ರಸಾದವನ್ನು ಕಳುಹಿಸಲಾಗುವುದು. ಶ್ರೀ ದೇವಳದ ಇ-ಹುಂಡಿ ಸೇವೆಗೆ ಯಾವುದೇ ಯುಪಿಐ ಮೂಲಕ ಮೊತ್ತವನ್ನು ಪಾವತಿ ಮಾಡಬಹುದು ಎಂದು ತಿಳಿಸಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ