Breaking News

ಸ್ಥಳ ಮಹಜರು ವೇಳೆ ಮಚ್ಚಿನಿಂದ್ಲೇ ಪೊಲೀಸರ ಮೇಲೆ ದಾಳಿಗೆ ಯತ್ನ!

Spread the love

ತುಮಕೂರು: ನಗರದಲ್ಲಿ ಪೊಲೀಸರ ಬಂದೂಕು ಸದ್ದು ಮಾಡಿದೆ. ರೌಡಿಶೀಟರ್ ರೋಹಿತ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ತುಮಕೂರು ತಾಲೂಕಿನ ಮಾರನಾಯಕಪಾಳ್ಯ ಬಳಿ ಶೂಟೌಟ್ ನಡೆದಿದೆ. ತಿಲಕ್ ಪಾರ್ಕ್ ಸಿಪಿಐ ಮುನಿರಾಜು ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಡಕಾಯಿತಿ ಪ್ರಕರಣದಲ್ಲಿ ಆರೋಪಿ ರೋಹಿತ್‍ನನ್ನ ಪೊಲೀಸರು ಬಂಧಿಸಿದ್ದಾರೆ.

ಡಕಾಯಿತಿಗೆ ಬಳಸಿದ್ದ ಮಚ್ಚು ಬಚ್ಚಿಟ್ಟಿದ್ದ ಜಾಗಕ್ಕೆ ಪೊಲೀಸರನ್ನ ರೋಹಿತ್ ಕರೆದೊಯ್ದಿದ್ದಾನೆ. ಇದೇ ವೇಳೆ ಮಚ್ಚು ತೋರಿಸಿ ಅದೇ ಮಚ್ಚಿನಿಂದ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದಾನೆ. ಹೆಡ್ ಕಾನ್ಸ್ ಟೇಬಲ್ ಹನುಮರಂಗಯ್ಯ ಮೇಲೆ ರೋಹಿತ್ ಮಚ್ಚು ಬೀಸಿದ್ದಾನೆ. ರೋಹಿತ್ ದಾಳಿಗೆ ಪ್ರತಿಯಾಗಿ ಸಿಪಿಐ ಮುನಿರಾಜು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಾಳಿಯಲ್ಲಿ ಹಾರಿಸಿದ ಗುಂಡಿಗೆ ಶರಣಾಗದ ರೋಹಿತನ ಎಡಗಾಲಿಗೆ ಶೂಟ್ ಮಾಡಿದ್ದಾರೆ.

ಗಾಯಾಳು ರೋಹಿತ್ ನನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಎಡಭುಜಕ್ಕೆ ಮಚ್ಚಿನೇಟು ತಿಂದ ಹನುಮರಂಗಯ್ಯ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಶೂಟೌಟ್ ನಡೆದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ