Breaking News

ಲಷ್ಕರ್-ಎ-ತೊಯ್ಬಾ ಇಬ್ಬರು ಭಯೋತ್ಪಾದಕರ ಬಂಧನ: ಭಾರಿ ಸ್ಫೋಟಕ, ಶಸ್ತ್ರಾಸ್ತ್ರಗಳ ವಶಕ್ಕೆ

Spread the love

ಅಮೃತಸರ (ಪಂಜಾಬ್): ಕೇಂದ್ರ ಗುಪ್ತಚರ ಸಂಸ್ಥೆಗಳ ನೆರವಿನಿಂದ ಪಂಜಾಬ್​ನ ಎಸ್​ಎಸ್​ಒಸಿ ತಂಡವು ಲಷ್ಕರ್-ಎ-ತೊಯ್ಬಾ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಅಮೃತಸರದಲ್ಲಿ ಬಂಧಿಸಿದೆ.

ಬಂಧಿತ ಭಯೋತ್ಪಾದಕರಿಂದ 2 ಐಇಡಿಗಳು, 2 ಹ್ಯಾಂಡ್ ಗ್ರೆನೇಡ್‌ಗಳು, 1 ಪಿಸ್ತೂಲ್, 2 ಮ್ಯಾಗಜೀನ್‌ಗಳು, 24 ಕಾರ್ಟ್ರಿಡ್ಜ್‌ಗಳು, 1 ಟೈಮರ್ ಸ್ವಿಚ್, 8 ಡಿಟೋನೇಟರ್‌ಗಳು ಮತ್ತು 4 ಬ್ಯಾಟರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತಂತೆ ಪಂಜಾಬ್ ಡಿಜಿಪಿ ಗೌರವ್ ಯಾದವ್ ಸಾಮಾಜಿಕ ಜಾಲತಾಣವಾದ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪಂಜಾಬ್ ಡಿಜಿಪಿ ಗೌರವ್ ಯಾದವ್ ಮಾಹಿತಿ: ಅಮೃತಸರದ ಎಸ್​ಎಸ್​ಒಸಿ, ಕೇಂದ್ರ ಗುಪ್ತಚರ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದವು. ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. 2 ಐಇಡಿಗಳು, 2 ಹ್ಯಾಂಡ್ ಗ್ರೆನೇಡ್‌ಗಳು, 2 ಮ್ಯಾಗಜೀನ್‌ಗಳಿರುವ 1 ಪಿಸ್ತೂಲ್, 24 ಕಾಟ್ರಿಡ್ಜ್‌ಗಳು, 1 ಟೈಮರ್ ಸ್ವಿಚ್, 8 ಡಿಟೋನೇಟರ್‌ಗಳು ಮತ್ತು 4 ಬ್ಯಾಟರಿಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.

 ಎಲ್‌ಟಿಇಯ ಇಬ್ಬರು ಭಯೋತ್ಪಾದಕರ ಬಂಧನ: ಭಾರಿ ಸ್ಫೋಟಕ, ಶಸ್ತ್ರಾಸ್ತ್ರಗಳ ವಶಕ್ಕೆಈ ಹಿಂದೆ, ಲಷ್ಕರ್-ಎ-ತೊಯ್ಬಾ ಕಾರ್ಯಕರ್ತರ ಬಂಧನ: 2011ರಲ್ಲಿ ಪಂಜಾಬ್ ಪೊಲೀಸರು ಜಮ್ಮು ಮತ್ತು ಕಾಶ್ಮೀರದ ಇಬ್ಬರು ಲಷ್ಕರ್-ಎ-ತೊಯ್ಬಾ ಕಾರ್ಯಕರ್ತರನ್ನು ಬಂಧಿಸಿದ್ದರು. ಪಂಜಾಬ್‌ನಿಂದ ಕಾಶ್ಮೀರಕ್ಕೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳ ಸಕ್ರಿಯ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಇಬ್ಬರು ಭಯೋತ್ಪಾದಕರನ್ನು ಪಠಾಣ್‌ಕೋಟ್ ಪೊಲೀಸರು ಬಂಧಿಸಿದ್ದರು.

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಭಯೋತ್ಪಾದಕ ಇಶ್ಫಾಕ್ ದಾರ್: ಪೊಲೀಸ್ ಠಾಣೆಯ ಸದರ್ ಪ್ರದೇಶದ ಅಮೃತಸರ-ಜಮ್ಮು ಹೆದ್ದಾರಿಯ ಚೆಕ್‌ಪಾಯಿಂಟ್‌ನಲ್ಲಿ ಪಠಾಣ್‌ಕೋಟ್ ಪೊಲೀಸರು ಟ್ರಕ್ ಅನ್ನು ತಡೆದಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಇಷ್ಫಾಕ್ ಅಹ್ಮದ್ ದಾರ್ ಅಲಿಯಾಸ್ ಬಶೀರ್ ಅಹ್ಮದ್ ಖಾನ್ ಪಂಜಾಬ್‌ನಿಂದ ಈ ಶಸ್ತ್ರಾಸ್ತ್ರಗಳನ್ನು ತರುವಂತೆ ಸೂಚಿಸಿದ್ದನು ಎಂದು ಆರೋಪಿಗಳು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಪಡಿಸಿದ್ದರು. ಕಾಶ್ಮೀರ ಕಣಿವೆಯಲ್ಲಿ ಸಕ್ರಿಯನಾಗಿದ್ದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಇಶ್ಫಾಕ್ ದಾರ್ 2017ರಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದನು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ