Breaking News

ಶೀಘ್ರದಲ್ಲೇ ಸಿಬಿಐ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಳ್ಳುವೆ: ಪ್ರವೀಣ್ ಸೂದ್ ಟ್ವೀಟ್​

Spread the love

ಬೆಂಗಳೂರ: ಸಿಬಿಐನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಕರ್ನಾಟಕ ರಾಜ್ಯ ಪೊಲೀಸ್ ಡಿಜಿ ಆಯಂಡ್​ ಐಜಿಪಿ ಪ್ರವೀಣ್ ಸೂದ್ ಟ್ವಿಟ್ ಮಾಡಿ ತಮ್ಮ ಅಧಿಕಾರವನ್ನು ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.

ಒಟ್ಟು ಮೂರು ಟ್ವೀಟ್​ಗಳ ಮೂಲಕ ಮಾಹಿತಿ ನೀಡಿರುವ ಪ್ರವೀಣ್ ಸೂದ್, ಅಧಿಕಾರವನ್ನು ಶೀಘ್ರದಲ್ಲಿಯೇ ಹಸ್ತಾಂತರ ಮಾಡುತ್ತೇನೆ. ಕರ್ನಾಟಕ ಡಿಜಿ, ಐಜಿಪಿ ಅಧಿಕೃತ ಟ್ವಿಟ್ಟರ್ ಖಾತೆ ನಿರ್ವಹಣೆಯಿಂದ ಹೊರಬರುತ್ತಿದ್ದೇನೆ. ಇವು ಕರ್ನಾಟಕ ಡಿಜಿ ಆಯಂಡ್​ ಐಜಿಪಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಇದು ಕೊನೆಯ ಟ್ವೀಟ್​ ಆಗಿವೆ ಎಂದು ಬರೆದುಕೊಂಡಿದ್ದಾರೆ.

 

 

2020ರಲ್ಲಿ ಈ ಖಾತೆಯ ನಿರ್ವಹಣೆಯನ್ನು ಪ್ರಾರಂಭಿಸಿದ್ದೆ. ಸಾಕಷ್ಟು ವಿಷಯಗಳ ಬಗ್ಗೆ ನಿಮ್ಮೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದೇನೆ. 1.6 ಲಕ್ಷ ಜನ ಈ ಖಾತೆಯನ್ನ ಅನುಸರಿಸುತ್ತಿರುವುದು ತುಂಬಾ ಖುಷಿಕೊಟ್ಟಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

 

 

ವೈಯಕ್ತಿಕ ಟ್ವಿಟರ್ ಹ್ಯಾಂಡಲ್ ಮುಂದುವರಿಕೆ: ಕರ್ನಾಟಕ ಪೊಲೀಸರಿಗೆ ಸಂಬಂಧಿಸಿದ ಅಧಿಕೃತ ವಿಷಯಗಳ ಕುರಿತು ನಿಮ್ಮ ಪ್ರತಿಕ್ರಿಯೆಗಳಿಗಾಗಿ ತುಂಬಾ ಧನ್ಯವಾದಗಳು. ನಾನು ನನ್ನ @copsview ವೈಯಕ್ತಿಕ ಟ್ವಿಟರ್ ಅಕೌಂಟ್ ಬಳಸುವುದನ್ನು ಮುಂದುವರಿಸುತ್ತೇನೆ ಎಂದು ಪ್ರವೀಣ್​ ಸೂದ್​ ತಿಳಿಸಿದ್ದಾರೆ.

2025ರಲ್ಲಿ ರಿಟರ್ನ್: ನಿಮ್ಮೆಲ್ಲರ ಬೆಂಬಲಕ್ಕಾಗಿ ಧನ್ಯವಾದಗಳು. 2025 ರ ಮೇ ತಿಂಗಳಿನಲ್ಲಿ ಮತ್ತೆ ರಾಜ್ಯಕ್ಕೆ ಹಿಂತಿರುಗುತ್ತೇನೆ ಎಂದು ಸರಣಿ ಟ್ವಿಟ್​ಗಳ ಮೂಲಕ ಹುದ್ದೆಯಿಂದ ವರ್ಗಾವಣೆ ಆಗುತ್ತಿರುವುದನ್ನು ಭಾವನಾತ್ಮಕವಾಗಿ ಜನರೊಂದಿಗೆ ಹಂಚಿಕೊಂಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ