Breaking News

ಯತ್ನಾಳ್​ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು,ನಿಮ್ಮನ್ನು ಏನು ಮಾಡಬೇಕು: ಹರಕು ಬಾಯಿಈಶ್ವರಪ್ಪ ಹೇಳಿಕೆಗೆ  ಅಭಿಮಾನಿ ಫೋಸ್ಟ್

Spread the love

ವಿಜಯಪುರ: ತಮ್ಮನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ  ಅಭಿಮಾನಿ ಫೋಸ್ಟ್ ಮಾಡಿರುವುದನ್ನು ನಮ್ಮ ಖಾತೆಗೆ  ಹಂಚಿಕೊಳ್ಳುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿರುಗೇಟು ನೀಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಮಾಡಿರುವ ಆರೋಪಕ್ಕೆ ನಿನ್ನೆ ಸಚಿವ ಕೆ.ಎಸ್.ಈಶ್ವರಪ್ಪ, ಯತ್ನಾಳ್​ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದ್ದರು.

ಈ ಹೇಳಿಕೆಗೆ ಖಾರವಾಗಿ ಫೇಸ್​​ಬುಕ್ ಮೂಲಕ ಯತ್ನಾಳ್​ ಬೆಂಬಲಿಗ ಎನ್ನಲಾದ ಅಂಕುಶ ವಸಿಷ್ಟ, ಈಶ್ವರಪ್ಪನವರೇ ಹರಕು ಬಾಯಿ ಯಾರದ್ದು ಅಂತ ನಮಗೆ ಚೆನ್ನಾಗಿ ಗೊತ್ತಿದೆ. ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸುವದಾದರೆ ನಿಮ್ಮನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಈ ಪೋಸ್ಟ್​​ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ತಮ್ಮ ಫೇಸ್​ಬುಕ್ ಅಕೌಂಟ್ ಮೂಲಕ ಟ್ಯಾಗ್ ಮಾಡಿದ್ದಾರೆ. ಇದರ ಜೊತೆ ಸಾಕಷ್ಟು ಲೈಕ್​​ಗಳು ಈ ಪೋಸ್ಟ್​​ಗಳಿಗೆ ಬಂದಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ರೀತಿ ಕರ್ನಾಟಕದಲ್ಲಿ ಬಸನಗೌಡ ಪಾಟೀಲ ಯತ್ನಾಳ್​ ಆಗಬೇಕು. ಬಸನಗೌಡ ಪಾಟೀಲ ಯತ್ನಾಳ್​ ಇಲ್ಲವೇ ಅನಂತಕುಮಾರ ಹೆಗಡೆ ಇಬ್ಬರು ರಾಜ್ಯದ ಸಿಎಂ, ಗೃಹ ಸಚಿವರಾಗಬೇಕು ಎಂದು ಪೋಸ್ಟ್ ಮೂಲಕ ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ