ಸಿಂಗಾಪುರ: ಸಿಂಗಾಪುರದಲ್ಲಿ ಮಾದಕವಸ್ತು ಕಳ್ಳಸಾಗಣೆ ಉತ್ತೇಜಿಸಿದ್ದಲ್ಲದೇ, 1 ಕೆಜಿ ಗಾಂಜಾವನ್ನು ಅಕ್ರಮವಾಗಿ ಸಾಗಿಸಿರುವ ಅಪರಾಧದ ಮೇರೆಗೆ ಭಾರತ ಮೂಲದ ವ್ಯಕ್ತಿ ತಂಗರಾಜು ಸುಪ್ಪಯ್ಯನನ್ನು ಬುಧವಾರ ಗಲ್ಲಿಗೇರಿಸಲು ಸರ್ಕಾರ ನಿರ್ಧರಿಸಿದೆ.
ನಾರ್ವೆ, ಸ್ವಿಜರ್ಲೆಂಡ್ ಸೇರಿದಂತೆ ಕೆಲ ರಾಷ್ಟ್ರಗಳು ಹಾಗೂ ಸ್ಥಳೀಯ ಮರಣದಂಡನೆ ವಿರೋಧಿ ಸಂಘಟನೆಗಳು ತಂಗರಾಜು ಗಲ್ಲು ಶಿಕ್ಷೆಯನ್ನು ಆಕ್ಷೇಪಿಸಿದ ಹೊರತಾಗಿಯೂ, ಸಿಂಗಾಪುರ ಸರ್ಕಾರ ಬುಧವಾರ ಗಲ್ಲಿಗೇರಿಸಲು ನಿರ್ಧರಿಸಿದೆ. ಅಲ್ಲದೇ, ದೇಶದ ಕಾನೂನು ವ್ಯವಸ್ಥೆ ಹಾಗೂ ನ್ಯಾಯಾಧೀಶರ ತೀರ್ಮಾನ ಗೌರವಿಸುವುದು ಅಗತ್ಯವಾಗಿದೆ ಎಂದು ತಿಳಿಸಿದೆ.
Laxmi News 24×7