Breaking News

ಕಾಂಗ್ರೆಸ್​ನ ಮೂರನೇ ಪಟ್ಟಿ ನಿರ್ಧಾರ ಮಾಡೋದು ಯಾರು? ಇಂದು ಸಂಜೆ ತಯಾರಿ

Spread the love

ಬೆಂಗಳೂರು: ಚುನಾವಣಾ ಕಣ ಇನ್ನಷ್ಟು ರಂಗೇರುತ್ತಿದ್ದು ಆಮ್​ ಆದ್ಮಿ ಪಕ್ಷ ಇಂದು ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡಗಡೆ ಮಾಡಿದ್ದಾರೆ. ಅದಲ್ಲದೇ ಇಂದೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಲಿದೆ.

ಇಂದು ಸಂಜೆ ದೆಹಲಿಯಲ್ಲಿ ಸಿಇಸಿ ಸಬ್ ಕಮಿಟಿ ಮೀಟಿಂಗ್ ನಡೆಸಲಿದ್ದು ಈ ಸಂದರ್ಭ ಕಾಂಗ್ರೆಸ್​ನ ‌ಮೂರನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಲಾಗುವುದು ಎನ್ನಲಾಗಿದೆ.

 

ಈ ಬಾರಿ ಕಾಂಗ್ರೆಸ್​ ಹೈಕಮಾಂಡ್ ಸಿಇಸಿ ಬಿಟ್ಟು ಸಬ್‌ ಕಮಿಟಿ ಮಾಡಿದೆ. ಸಿಇಸಿಯಲ್ಲಿ ಸದಸ್ಯರು ಹೆಚ್ಚಾದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ರಾಜ್ಯದ ಇಬ್ಬರು ನಾಯಕರಿಗೆ ಮಾತ್ರ ಸಬ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ.

ಸಿಇಸಿ ಕಮಿಟಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್​ಗೆ ಮಾತ್ರ ಸ್ಥಾನ ನೀಡಲಾಗಿದ್ದು ಎಂ.ಬಿ ಪಾಟೀಲ್, ಪರಮೇಶ್ವರ್, ಹರಿಪಸ್ರಾದ್​ರನ್ನು ಕಾಂಗ್ರೆಸ್​ ಹೈಕಮಾಂಡ್ ಕೈ ಬಿಟ್ಟಿದೆ. ಇನ್ನು ಆ ಕಮಿಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ, ವೇಣುಗೋಪಾಲ, ಸುರ್ಜೆವಾಲ, ಮುಕುಲ್ ವಾಸ್ನಿಕ್​ಗೆ ಸ್ಥಾನ ಸಿಕ್ಕಿದೆ.

ಈ ಹೊಸ ಕಮಿಟಿ ಮೂರನೆ ಪಟ್ಟಿಯನ್ನು ತಯಾರಿಸಲಿದ್ದು ಯಾರಿಗೆ ಟಿಕೆಟ್​ ನೀಡಬೇಕು ಎನ್ನುವುದನ್ನು ಕೇವಲ ಏಳು ಜನರು ಮಾತ್ರ ನಿರ್ಧರಿಸಲಿದ್ದಾರೆ. ಮೂರನೆ ಪಟ್ಟಿಯನ್ನು ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ತಯಾರಿಸಲು ಯೋಜಿಸಲಾಗಿದ್ದು ನಾಳೆಯೇ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ