Breaking News

ಚೆನ್ನೈ-ದೆಹಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹೊಗೆ: ಪ್ರಯಾಣಿಕರು ಗಾಬರಿ

Spread the love

ಮರಾವತಿ (ಆಂಧ್ರಪ್ರದೇಶ): ‌ಚೆನ್ನೈ-ದೆಹಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಗಾಬರಿ ಮೂಡಿಸಿದ ಪ್ರಸಂಗ ನೆಲ್ಲೂರಿನಲ್ಲಿ ಭಾನುವಾರ ನಡೆದಿದೆ.

ಜನರ ಈ ಗಾಬರಿಗೆ ಇತ್ತೀಚೆಗೆ ಕೇರಳದ ರೈಲು ಬೋಗಿಗೆ ಬೆಂಕಿಯಿಟ್ಟ ದುರ್ಘಟನೆಯೇ ಕಾರಣ ಎಂದು ನಂಬಲಾಗಿದೆ.

 

ಪ್ರಯಾಣದ ವೇಳೆ ಚೆನ್ನೈ-ದೆಹಲಿ ಎಕ್ಸ್‌ಪ್ರೆಸ್‌ನ B-5ನೇ ಬೋಗಿಯಲ್ಲಿ ಹೊಗೆ ಎದ್ದಿರುವುದು ಕಂಡುಬಂತು. ಈ ಸಂದರ್ಭ ಆಗಬಹುದಾದ ದುರಂತ ತಪ್ಪಿಸುವ ಎಚ್ಚರಿಕೆಯಿಂದ ಚಾಲಕರು ರೈಲನ್ನು 20 ನಿಮಿಷಗಳ ಕಾಲ ಕಾವಾಲಿ ನಿಲ್ದಾಣದ ಸಮೀಪ ನಿಲ್ಲಿಸಿದರು.

ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ರೈಲು ಬೋಗಿಯ ಬ್ರೇಕ್ ಜಾಮ್‌ನಿಂದ ಹೊಗೆ ಉಂಟಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ದುರಸ್ತಿ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರೆಸಿತು.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ