Breaking News

ಹಾವೇರಿಯಲ್ಲಿ ನಿಶ್ಚಿತಾರ್ಥಗೊಂಡ ಭಾವಿ ಪತಿಯ ಕುತ್ತಿಗೆಗೆ ಚಾಕು ಇರಿದ ಯುವತಿ: ಖತರ್ನಾಕ್ ಕೃತ್ಯಕ್ಕೆ ಪೊಲೀಸರೇ ಶಾಕ್

Spread the love

ಹಾವೇರಿ : ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ಅಪ್ರಾಪ್ತ ಬಾಲಕಿಯೊಬ್ಬಳು ಭಾವಿ ಪತಿಯ ಕುತ್ತಿಗೆಗೆ ಚಾಕು ಇರಿದ ಘಟನೆ ಬೆಳಕಿಗೆ ಬಂದಿದೆ.

ಅಪ್ರಾಪ್ತ ಬಾಲಕಿ ಭಾವಿ ಪತಿಗೆ ಪಾರ್ಕ್​ಗೆ ಕರೆದು ರೀಲ್ಸ್ ಮಾಡೋಣ ಎಂಬ ನೆಪದಲ್ಲಿ ಕರೆದು, ಶಿಲುಬೆಯಂತೆ ನಿಲ್ಲಿಸಿ ಫೋಟೋ ತೆಗೆಯುವಂತ ನಟಿಸಿ ಭಾವಿ ಪತಿಯ ಕುತ್ತಿಗೆಗೆ ಚಾಕು ಇರಿದ್ದಾಳೆ.

ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಚಾಕು ಇರಿತಕ್ಕೆ ಒಳಗಾದ ಯುವಕ ದೇವೆಂದ್ರಗೌಡ ಎಂದು ಗುರುತಿಸಲಾಗಿದೆ. ಈತ ಹರಪನಹಳ್ಳಿ ತಾಲೂಕಿನಲ್ಲಿ ಸೇಲ್ಸ್​ ಮನ್ ಆಗಿ ಕೆಲಸ ಮಾಡುತ್ತಿದ್ದನು.ಪ್ರೀತಿಸಿದ ಯುವತಿಯೇ ಭಾವಿ ಪತಿಯನ್ನು ಕೊಂದ ಘಟನೆಯನ್ನು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಪ್ರಕರಣ ತೀವ್ರಗೊಂಡ ಬೆನ್ನಲ್ಲೆ ಆರೋಪಿ ಯುವತಿಯನ್ನ ಅರೆಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ